ಗದಗ: ಲಿಂಗೈಕ್ಯ ಪಂ. ಡಾ. ಪುಟ್ಟರಾಜ ಗವಾಯಿಗಳವರು ನಾಟಕ, ಸಂಗೀತ ಹಾಗೂ ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಮೋಘವಾಗಿದ್ದು, ಸ್ಮರಣೀಯ ಎಂದು ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷ ಕೃಷ್ಣಾ ಹಡಪದ ಹೇಳಿದರು.
ಸವಿತಾ ಸಮಾಜ ಸುಧಾರಣಾ ಸಂಘದ ರುದ್ರ ಕ್ರಿಕೆಟ್ ತಂಡದ ನೇತೃತ್ವದಲ್ಲಿ ಇತ್ತೀಚೆಗೆ ಡಾ. ಪುಟ್ಟರಾಜ ಗವಾಯಿಗಳವರ 98ನೇ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಉಚಿತ ಕ್ಷೌರಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಟ್ಟರಾಜ ಗವಾಯಿಗಳವರ ಜಯಂತ್ಯುತ್ಸವದ ಅಂಗವಾಗಿ ಉಚಿತ ಕ್ಷೌರ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಂಘದ ವತಿಯಿಂದ ಸಮಾಜದ ಸುಧಾರಣೆಗಾಗಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಸಮಾಜ ಬಾಂಧವರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೇಮಂತ ಒಡ್ಡೆಪಲ್ಲಿ ಹಾಗೂ ಶ್ರೀನಿವಾಸ ಕೋಟೆಕಲ್ ಮಾತನಾಡಿ, ಕ್ಷೌರದ ಸೇವೆ ಸಮಾಜದ ಪವಿತ್ರ ಕಾರ್ಯವಾಗಿದೆ ಎಂದು ಹೇಳಿದರು. ಕಾಶಪ್ಪ ಬೂದೂರ ಅಧ್ಯಕ್ಷತೆ ವಹಿಸಿದ್ದರು.
ಗೋವಿಂದ ಕೋಟೆಕಲ್, ರವಿ ರಾಂಪೂರ, ವಿಜಯ ಹಡಪದ, ಮಹೇಶ ಒಡ್ಡೇಪಲ್ಲಿ, ಗಣೇಶ ಕಡಮೂರ, ಜಮ್ಮಣ್ಣ ಕಡಮೂರ, ರಮೇಶ ಹರಿಹರ, ಪರಶುರಾಮ ಬೂದೂರ, ಕುಮಾರ ಆದೋನಿ, ಕಿರಣ ರಾಂಪೂರ ಮತ್ತಿತರರು ಹಾಜರಿದ್ದರು. ರಾಘವೇಂದ್ರ ಬಾಯಲಗುಡ್ಡ ಸ್ವಾಗತಿಸಿದರು. ಸುರೇಶ ಬೂದೂರ ಕಾರ್ಯಕ್ರಮ ನಿರೂಪಿಸಿದರು. ಯಲ್ಲಪ್ಪ ರಾಂಪೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.