ADVERTISEMENT

ಬಿಸಿಯೂಟ ಸೇವಿಸಿ 80ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 6:06 IST
Last Updated 4 ಮಾರ್ಚ್ 2014, 6:06 IST

ರೋಣ:  ಬಿಸಿಯೂಟ  ಆಹಾರ ಸೇವಿಸಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಮಾರ­ನ­ಬಸರಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಮಕ್ಕಳು ತಾಲ್ಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯಾಹ್ನದ ಬಿಸಿಯೂಟದ ದೋಷದಿಂದಾಗಿ ಮಧ್ಯಾಹ್ನ 2 ಗಂಟೆ  ಸುಮಾರಿಗೆ ಊಟ ಮಾಡಿದ 80ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ,
ಭೇದಿ ಕಾಣಿಕೊಂಡಿತು.  ಗ್ರಾಮಕ್ಕೆ ಎರಡು ಆಂಬುಲೆನ್‌್ಸ ಕರೆಸಿ ತಾಲ್ಲೂಕು ಆಸ್ಪತ್ರೆಗೆ ಕಳಿಸಲಾಯಿತು.

ಇವರಲ್ಲಿ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಊಟವಾದ ನಂತರ 3 ಗಂಟೆ ಸುಮಾರಿಗೆ ವಿದ್ಯಾರ್ಥಿಗಳಿಗೆ ಹೊಟ್ಟೆ ನೂವು, ವಾಂತಿ, ಭೇದಿ ಆರಂಭವಾಯಿತು. ಇದರಿಂದ ಆತಂಕಗೊಂಡ ಪೋಷಕರು ಶಾಲಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.  ನಂತರ ಸಿಬ್ಬಂದಿ ಆಂಬುಲೆನ್‌್ಸ ಕರೆಸಿದರು. ‘ನಿತ್ಯ ಅನ್ನದಲ್ಲಿ ಬಾಲುಹುಳ, ನುಸಿ, ದೂಳು ತುಂಬಿಕೊಂಡ ವಸ್ತಗಳನ್ನೇ ಬಳಸಿ ಅಡುಗೆ ತಯಾರಿಸುತ್ತಾರೆ. ಅಡುಗೆ ಮಾಡುವವರಿಗೆ ಮತ್ತು ಇಲ್ಲಿನ ಶಿಕ್ಷಕರಿಗೆ ಹೇಳಿದರೆ ನಾವು ಮಾಡುವುದು ಹೀಗೆ. ಬೇಕಾದರೆ ಊಟ ಮಾಡಿ ಇಲ್ಲವಾದರೆ ಮನೆಗೆ ಹೋಗಿ ಎಂದು ಗದರಿಸುತ್ತಾರೆ’ ಎಂದು ಕೆಲ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.

ಈ ಸುದ್ದಿ ತಿಳಿಯುತ್ತದ್ದಂತೆಯೇ ವಿದ್ಯಾರ್ಥಿಗಳ ಪಾಲಕರು  ಮಕ್ಕಳ ಸ್ಥಿತಿ ಕಂಡು   ಶಿಕ್ಷಕರನ್ನು ತರಾಟೆಗೆ ತಗೆದುಕೊಂಡರು, ವೈದ್ಯರು ಪಾಲಕ­ರನ್ನು ಸಮಾದಾನ ಪಡಿಸಿ ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಶೀಘ್ರವಾಗಿ ಗುಣಮುಖ­ರಾಗುತ್ತಾರೆ, ಸಮಾಧಾನವಾಗಿರಿ ಎಂದು ಹೇಳಿದಾಗ ಪಾಲಕರು ನಿಟ್ಟುಸಿರು ಬಿಟ್ಟರು.

‘ಇದು ಆಹಾರದ ದೋಷವಲ್ಲ. ಮಕ್ಕಳು ಅಂಗಡಿಯಲ್ಲಿ ದೊರೆಯುವ ಖಾರದ ಪುಡಿ ತಂದು ಅನ್ನದಲ್ಲಿ ಬೆರೆಸಿ ತಿಂದಿರುವುದರಿಂದ ಈ ರೀತಿಯಾಗಿದೆ’ ಎಂದು  ಮುಖ್ಯ ಶಿಕ್ಷಕ ಪಿ.ಬಿ.ಪಾಟೀಲ ತಿಳಿಸಿದರು. ‘ಆಹಾರದಲ್ಲಿ ದೋಷ ಇರುವ ಕಾರಣ ಏಕಕಾಲಕ್ಕೆ ಮಕ್ಕಳು ಅಸ್ವಸ್ಥರಾಗಿದ್ದಾರೆ.  ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಯಾವ ಮಕ್ಕಳಿಗೂ ಪ್ರಾಣಾಪಾಯವಿಲ್ಲ. ಒಂದು ವೇಳೆ ಆರೋಗ್ಯ ತೊಂದರೆ ಕಾಣಿಸಿಕೊಂಡರೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಲಾಗುವುದು’ ಎಂದು  ವೈದ್ಯೆ ಡಾ. ಶಾಹಿನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.