ADVERTISEMENT

ಮತ್ತೆ ಬರಗಾಲದ ದವಡೆಗೆ ರೋಣ ತಾಲ್ಲೂಕು

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 7:25 IST
Last Updated 6 ಜುಲೈ 2012, 7:25 IST

ಗಜೇಂದ್ರಗಡ: ಬರದ ನಾಡು ಎಂದೇ ಬಿಂಬಿತಗೊಂಡಿರುವ ತಾಲ್ಲೂಕಿನಲ್ಲಿ ಮತ್ತೆ ಬರದ ಛಾಯೆ ಆವರಿಸಿದೆ. ಕಪ್ಪು ಮೋಡಗಳು ಹನಿಯಾಗಿ ಧರೆಗೆ ಇಳಿ ಯುತ್ತಿಲ್ಲ. ಪರಿಣಾಮ ತಡವಾದರೂ ವರುಣ ಕೃಪೆ ತೋರಬಹುದು ಎಂಬ ವಿಶ್ವಾಸದಲ್ಲಿ `ನೇಗಿಲ ಯೋಗಿ~ ತೇವಾಂಶದ ಕೊರತೆಯನ್ನು ಲೆಕ್ಕಿಸದೆ ಧೈರ್ಯದಿಂದ ಸಾಲ ಶೂಲ ಮಾಡಿ ಬೀಜ, ಗೊಬ್ಬರವನ್ನು ಭೂ ತಾಯಿಯ ಮಡಿಲಿಗೆ ಸುರಿದಿದ್ದಾನೆ.

ಹೀಗಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಕಮರುತ್ತಿದೆ. ಇನ್ನೊಂದೆಡೆ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ.ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 125 ಹೆಕ್ಟೇರ್ ಭತ್ತ, 260 ಹೆಕ್ಟೇರ್‌ಹೈಬ್ರೀಡ್ ಜೋಳ, 550 ಹೆಕ್ಟೇರ್ ಮೆಕ್ಕೆಜೋಳ, 40 ಹೆಕ್ಟೇರ್ ಶೇಂಗಾ, 150 ಹೆಕ್ಟೇರ್ ಕಬ್ಬನ್ನು ಕೊಳವೆ ಬಾವಿಯ ನೀರನ್ನು ಉಪಯೋಗಿಸಿ ಕೊಂಡು ಬಿತ್ತನೆ ಮಾಡಿದರೆ, 1279 ಹೆಕ್ಟರ್ ಹೆಸರು ಶುಷ್ಕಿ ಜಮೀನಿನಲ್ಲಿ ಬಿತ್ತನೆಯಾಗಿತ್ತು. ಆದೆ, ಮಳೆ ಅಭಾವ ದಿಂದ ಈ ಬೆಳೆ ಗಳ್ಲ್ಲೆಲ ನೆಲ ಕಚ್ಚುತ್ತಿ ರುವುದು ಅನ್ನ ದಾತನ ಜಂಘಾಬಲವನ್ನೇ ಕಳೆದುಕೊಳ್ಳುವಂತೆ ಮಾಡಿದೆ.

ರೋಣ ತಾಲ್ಲೂಕಿನ 1,10,500 ಹೆಕ್ಟರ್ ಸಾಗುವಳಿ ಪ್ರದೇಶದಲ್ಲಿ ಪ್ರಸಕ್ತ ವರ್ಷ 67,550 ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ, ವರುಣನ ಮುನಿಸಿನಿಂದಾಗಿ ಕೇವಲ 2,365 ಮಾತ್ರ ಬಿತ್ತನೆಯಾಗಿದೆ. ಈ ಬೆಳೆಗಳು ಸಹ ತೀವ್ರ ತೇವಾಂಶದ ಕೊರತೆಯನ್ನು ಎದುರಿಸುತ್ತಿವೆ. ಸದ್ಯ ಬಿತ್ತನೆಯಾಗಿರುವ ಬೆಳೆಯೂ ರೈತರ ಕೈಗೆಟುಕುವ ಲಕ್ಷಣಗಳಿಲ್ಲ.

ತಲೆ ಕೆಳಗಾದ ಇಲಾಖೆ ನಿರೀಕ್ಷೆ: ಪ್ರತಿ ವರ್ಷದಂತೆಯೇ ಪ್ರಸಕ್ತ ವರ್ಷ ತಾಲ್ಲೂಕಿನಾದ್ಯಂತ 189 ಮಿಲಿ ಮೀಟರ್ ಮುಂಗಾರು ಮಳೆ ಸುರಿ ಯುತ್ತದೆ. ಕಳೆದ ವರ್ಷ ಬರದಿಂದ ಉಂಟಾಗಿರುವ ನಷ್ಟ  ವನ್ನು ಭರಿಸಿಕೊಳ್ಳಲು ನೇಗಿಲ ಯೋಗಿಗೆ ಪ್ರಸಕ್ತ ವರ್ಷದ ಮುಂಗಾರು ಹಂಗಾ ಮಿನ ಪ್ರಮುಖ ಮಳೆಗಳು ನೆರವಾಗು ತ್ತವೆ ಎಂಬ ನಿರೀಕ್ಷೆಗಳನ್ನಿಟ್ಟುಕೊಂಡ ಕೃಷಿ ಇಲಾಖೆ ರೈತರ ಅನುಕೂಲಕ್ಕಾಗಿ ತಾಲ್ಲೂಕಿನ 3 ರೈತ ಸಂಪರ್ಕ ಕೇಂದ್ರ ಹಾಗೂ 9 ಭೂಚೇತನ ಕೇಂದ್ರಗಳಿಗೆ ಹೆಸರು, ಸಜ್ಜಿ, ಶೇಂಗಾ, ಮೆಕ್ಕೆಜೋಳ, ತೊಗರಿ, ಹೈಬ್ರೀಡ್ ಜೋಳ, ಸೂರ್ಯ ಕಾಂತಿ ಸೇರಿದಂತೆ ಒಟ್ಟು 15,874 ಕ್ವಿಂಟಲ್ ಅಗತ್ಯ ಬೀಜ ಪೂರೈಸಿತು.

ಆದರೆ, ರೈತರು ಸಹ ರೈತ ಕೇಂದ್ರಗಳಲ್ಲಿ ದೊರೆಯುವ ರಿಯಾಯಿತ ದರದ ಬೀಜಗಳನ್ನು ಕೊಂಡೊಯ್ದು ವರುಣನ ಕೃಪೆಗೆ ಕಾದು ಕುಳಿತರು.ಆದರೆ, ಮಳೆರಾಯ ಸಕಾಲಕ್ಕೆ ಸುರಿ ಯದಿರುವುದರಿಂದ ಬೇಸತ್ತ ರೈತರು ತತಿ (ಬಿತ್ತನೆ ಅವಧಿ) ಮುಗಿಯುವುದರ ಒಳಗಾಗಿ ಬೀಜಗಳನ್ನು ಭೂತಾಯಿಯ ಒಡಲಿಗೆ ಸುರಿದರು. ಆದರೆ, ಇಲಾಖೆ ಅಂದಾಜಿನಂತೆ 189 ಮಿಲಿ ಮೀಟರ್ ಸುರಿಯಬೇಕಿದ್ದ ಮಳೆ ಕೇವಲ 57.97 ಮಿಲಿ ಮೀಟರ್ ಮಳೆಯಾಗಿದ್ದು, ಕೃಷಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಸಾಲ-ಶೂಲ ಮಾಡಿ ಬಿತ್ತನೆ ಮಾಡಿ, ಲಾಭದ ಕನಸು ಕಂಡಿದ್ದ ರೈತ ಸಮೂಹ ವನ್ನು ವರುಣ ಇನ್ನಿಲ್ಲದ ರೀತಿ ಕಾಡಿದ್ದಾನೆ. ಪರಿಣಾಮ ಲಾಭವಿರಲಿ, ಬಿತ್ತನೆ ಮಾಡಿದ ಖರ್ಚು ಸಹ ಕೈಗೆಟು ಕುತ್ತಿಲ್ಲ ಪರಿಣಾಮ ಕುಷ್ಕಿ ಬೇಸಾಯದ ರೈತ ಸಮೂಹ ಸಾಲದ ಶೂಲಕ್ಕೆ ಸಿಲುಕಿದೆ. ಇನ್ನೊಂದೆಡೆ, ಇರೋ ಅಲ್ಪ ಪ್ರಮಾಣದ ಅಂತರ್ ಜಲಮಟ್ಟವನ್ನು ನೆಚ್ಚಿಕೊಂಡು ಅಪಾರ ಪ್ರಮಾಣದ ಖರ್ಚು ಮಾಡಿದ್ದ ರೈತರಿಗೆ ಕೊಳವೆ ಬಾವಿಗಳಲ್ಲಿನ ಅಂತರ್ ಜಲ  ಮಟ್ಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಬೆಳೆಗಳು ತೀವ್ರ ತೇವಾಂಶದ ಕೊರತೆ ಎದುರಿಸುತ್ತಿದ್ದು, ಕಮರಿ ಹೋಗುತ್ತಿವೆ ಎಂದು ರೈತರಾದ ಕೂಡ್ಲೆಪ್ಪ ಗುಡಿಮನಿ, ಶಶಿಧರ ಹೂಗಾರ ಅಳಲು.

ಪರಿಹಾರ ಸಮೀಕ್ಷೆಗೆ ನಿರ್ದೇಶನ ವಿಲ್ಲ: ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದ ಬರಕ್ಕೆ ಸಂಬಂಧಿಸಿದಂತೆ ರೈತರಿಗೆ ಉಂಟಾದ ನಷ್ಟಕ್ಕೆ ಸಂಬಂಧಿಸಿ ದಂತೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಗತ್ಯ ಸಮೀಕ್ಷೆ ನಡೆಸುವಂತೆ ಸರ್ಕಾರ ದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ತಾಲ್ಲೂಕು ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.