ADVERTISEMENT

ಮಳೆ: ಕಿತ್ತುಹೋದ ಸಿಂಗಟಾಲೂರ ಏತ ನೀರಾವರಿ ಯೋಜನೆ ಕಾಲುವೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 6:32 IST
Last Updated 4 ಅಕ್ಟೋಬರ್ 2017, 6:32 IST
ಡಂಬಳ ಹೋಬಳಿಯ ಹೈತಾಪೂರ- ಮೇವುಂಡಿ ಗ್ರಾಮದಿಂದ ಹಾದುಹೋಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಮಳೆಗೆ ಕಿತ್ತು ಹೋಗಿದೆ
ಡಂಬಳ ಹೋಬಳಿಯ ಹೈತಾಪೂರ- ಮೇವುಂಡಿ ಗ್ರಾಮದಿಂದ ಹಾದುಹೋಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಮಳೆಗೆ ಕಿತ್ತು ಹೋಗಿದೆ   

ಡಂಬಳ: ಹೋಬಳಿ ವ್ಯಾಪ್ತಿಯಲ್ಲಿ ಸತತ ವಾಗಿ ಮಳೆಯಾಗಿದ್ದರಿಂದ ಹೈತಾಪುರ, ಮೇವುಂಡಿ, ಯಕ್ಲಾಸಪುರ, ಬರ ದೂರ, ವೆಂಕಟಾಪುರ ಗ್ರಾಮಗಳ ಹೊರವಲಯದಿಂದ ಹಾದು ಹೋಗಿ ರುವ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆಯು ಅಲ್ಲಲ್ಲಿ, ಒಡೆದು, ಜಮೀನುಗಳಿಗೆ ನೀರು ನುಗ್ಗಿ, ಬೆಳೆ ಹಾನಿಯಾಗಿದೆ.‌‌‌

‘ಕಳಪೆ ಕಾಮಗಾರಿಯಿಂದ ಕಾಲುವೆ ಒಡೆದಿದೆ. ಕೆಲವೆಡೆ ಸಂಪೂರ್ಣ ಕಿತ್ತು ಹೋಗಿದೆ. ಈ ಕಾಲುವೆ ಮೂಲಕ ನೀರು ಹರಿಸುವ ಮುನ್ನವೇ ಸಂಪೂರ್ಣ ಕಿತ್ತುಕೊಂಡು ಹೋಗಿರುವುದು ಕಾಮಗಾರಿ ಗುಣಮಟ್ಟವನ್ನು ತೋರಿಸುತ್ತದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ, ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ ಅವರು, ‘ಕಳಪೆ ಕಾಮಗಾರಿಯಿಂದ ಈ ಕಾಲುವೆ ಉದ್ಘಾಟನೆಗೆ ಮೊದಲೇ ಕಿತ್ತುಹೋಗಿದೆ.

ADVERTISEMENT

ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸ ಲಾಗುವುದು’ ಎಂದರು.
ಶೇಖಪ್ಪ ಯಾವಗಲ್, ಲಕ್ಷ್ಮಣ ಬೂದಿಹಾಳ, ಚಂದ್ರ ಗೌಡ ಪಾಟೀಲ, ಮಲ್ಲಪ್ಪ ಬಿಸ ನಳ್ಳಿ, ಮಹೇಶ ಕವಲೂರ, ರಮೇಶ ಹಲವಾಗಲಿ, ಶಿವಪ್ಪ ಕುಂಬಾರ, ಪ್ರವೀಣ ಹಾರೋಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.