ADVERTISEMENT

`ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿ'

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 6:46 IST
Last Updated 22 ಡಿಸೆಂಬರ್ 2012, 6:46 IST

ರೋಣ: ರಾಜ್ಯ ಸರಕಾರ ರೈತ ಸಮುದಾಯಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.  ಯೋಜನೆಗಳ ತತ್ವವನ್ನು ರೈತರು ಅರಿತು ನವೀನ ಕೃಷಿ ಪದ್ಧತಿ ಅಳವಡಿ ಸಿಕೊಳ್ಳುವುದರಿಂದ ಕೃಷಿ ಬದುಕು ಸುಧಾರಣೆಯಾಗಲಿದೆ ಎಂದು ಜಿ.ಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ ಹೇಳಿದರು.

ಪಟ್ಟಣದ ಅಂದಾನಪ್ಪ ದೊಡ್ಡ ಮೇಟಿ ಸಭಾಭವನದಲ್ಲಿ ತಾಲ್ಲೂಕು ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಆಶ್ರಯದಲ್ಲಿ ನಡೆದ ಕೃಷಿ ಮಾಹಿತಿ ಆಂದೋಲನ 2012 ರ ಅಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಹಳೇ ಸಂಪ್ರದಾಯದ ಕೃಷಿ ಪದ್ಧತಿಗೆ ವಿದಾಯ ಹೇಳಿ ವೈಜ್ಞಾನಿಕ ತಳಹದಿಯ ಕೃಷಿಯಲ್ಲಿ ತೊಡಗಿ ಕೊಂಡಾಗ ನಾಡಿನ ಎಲ್ಲ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಇಲ್ಲವಾದಲ್ಲಿ ಅನ್ನಕ್ಕಾಗಿ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.  ಎಪಿಎಂಸಿ ಸದಸ್ಯ ಪರ್ವತಗೌಡ ಪೋಲೀಸ ಪಾಟೀಲ ಮಾತನಾಡಿ, ಎಳೆಯಲಾರದ ಎತ್ತು, ಉಳಲಾರದ ಮಗ, ಮೊಳೆಕೆಯೊಡೆಯದ ಬೀಜ ಇದ್ದರೇ ಏನು ಪ್ರಯೋಜನ ಎಂಬಂತೆ ಹಳೆ ಪದ್ಧತಿ ಕಿತ್ತೊಗೆದು ಹೊಸ ಕೃಷಿ ಪದ್ಧತಿ ಬಳಸಿಕೊಂಡು ರೈತರು ಉನ್ನತ ಪ್ರಗತಿ ಸಾಧಿಸಿದಾಗ ನಾಡು ನೆಮ್ಮದಿಯ ನಿಟ್ಟುಸಿರು ಬೀಡುತ್ತದೆ ಎಂದು ರೈತರಿಗೆ ಕಿವಿಮಾತು ಹೇಳಿದರು. 

ಅಶೋಕ ನವಲಗುಂದ ಮಾತ ನಾಡಿ, ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಕೃಷಿ ನೀತಿಯನ್ನು ಅಳವಡಿಸಿಕೊಳ್ಳುವುದು ಅವಶ್ಯ ವಾಗಿದೆ. ಆದರೆ ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಒತ್ತು ನೀಡುವುದು ಅವಶ್ಯವಾಗಿದೆ ಎಂದರು. ತಾ.ಪಂ ಅಧ್ಯಕ್ಷೆ ಲಲಿತಾ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದಲ್ಲಿ ಶಿವಣ್ಣ ಅರಹುಣಸಿ, ಶಂಕರ ಕಳಿಗೊಣ್ಣವರ, ಜಂಟಿ ನಿದೇರ್ಶಕ ಕೃಷ್ಣಮೂರ್ತಿ ಮಾತ ನಾಡಿದರು.

ಎಪಿಎಂಸಿ ಸದಸ್ಯ ಮಲ್ಲನ ಗೌಡ ಪಾಟೀಲ, ತಾ.ಪಂ ಸದಸ್ಯರಾದ ಶಿವಕುಮಾರ ನೀಲಗುಂದ, ಶಿವ ಕುಮಾರ ಸಾಲಮನಿ, ರೇಣುಕಾ ಹಟ್ಟಿಮನಿ, ಶಾರದಾದೇವಿ ಬೆಳಹಾರ, ಶೈಲಜಾ ಯರಗೇರಿ, ಮಾಲಾನಬಿ ಗಡಾದ, ಬಸವಂತಪ್ಪ ತಳವಾರ, ತಾಲ್ಲೂಕು  ಬಿಜೆಪಿ ಘಟಕದ ಅಧ್ಯಕ್ಷ ಆನಂದರಾವ್ ಇನಾಮದಾರ, ಪರಡ್ಡಿ, ತಾ.ಪಂ ಇಓ ಎಸ್.ಎಂ.ರುದ್ರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು. ಎಸ್.ಎ.ಸೂಡಿಶೆಟ್ಟರ ಸ್ವಾಗತಿಸಿ ದರು, ಸಿದ್ದೇಶ ಕೊಡಿಹಳ್ಳಿ ನಿರೂಪಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT