ಗಜೇಂದ್ರಗಡ: ಸ್ಥಳೀಯ ಬ್ರಾಹ್ಮಣ ಸಮಾಜ, ಬ್ರಾಹ್ಮಣ ಯುವ ವೇದಿಕೆ ಹಾಗೂ ಬ್ರಾಹ್ಮಣ ಮಹಿಳಾ ಮಂಡಳಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ವಿಶ್ವನಾಥ ಸೀತಾರಾಮ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. 
 ಬೆಳಗ್ಗೆ ವಿಶೇಷ ಪೂಜೆಯೊಂದಿಗೆ ರುದ್ರಾಭಿಷೇಕ, ತುಳಸಿ ಅರ್ಚನೆ, ಬಿಲ್ವಾರ್ಚನೆ ಮುತಾದ ಪೂಜಾ ಕಾರ್ಯಕ್ರಮಗಳು ಜರುಗಿದವು. ಬಳಿಕ ಶ್ರೀರಾಮದೇವನ ಭಾವಚಿತ್ರವನ್ನು ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. 
ಮಧ್ಯಾಹ್ನ ಸಮಾಜದ ಸುಮಂಗಲೆಯರು ಶ್ರೀರಾಮ ದೇವರನ್ನು ತೊಟ್ಟಿಲಲ್ಲಿ ಹಾಕಿ, ಜೋಗುಳ ಹಾಡುಗಳನ್ನು ಹಾಡುವ ಮೂಲಕ ಶ್ರೀರಾಮನ ತೊಟ್ಟಿಲೋತ್ಸವವನ್ನು ನೆರವೇರಿಸಿದರು. ಬಳಿಕ ಸದ್ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ,ಶ್ರೀರಾಮನ ಕೃಪೆಗೆ ಪಾತ್ರರಾದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣಾಚಾರ್ಯ ಇಟಗಿ, ಹನಮಂತಭಟ್ಟ ತಾಸಿನ, ಮೋಹನ ಜೀರೆ, ಎಲ್.ಎನ್‌ತೈಲಂಗ್, ಕಲ್ಲಿನಾಥ ಜೀರೆ, ರಾಮ ಚಂದ್ರ ಗಾಡಗೊಳ್ಳಿ, ವಿನಾಯಕ ರಾಜಪೂರೋಹಿತ, ಅಡಿವಿರಾವ್ ದೇಸಾಯಿ, ಸಂಜೀನ ಕುಲಕರ್ಣಿ, ಶೇಷಾದ್ರಿ ಇನಾಮದಾರ, ಪ್ರಸಾದ ಕುಲಕರ್ಣಿ, ಪ್ರಮೋದ ಕಲ್ಲೂರ, ಶ್ರೀರಾಮ ಸಾತರಕರ, ಲಕ್ಷ್ಮೀನಾರಾಯಣ ಗಾಡಗೊಳ್ಳಿ, ರಘುನಾಥ ತಾಸಿನ, ರವಿ ಕುಲಕರ್ಣಿ, ಪರಶುರಾಮ ಕುಲಕರ್ಣಿ, ಶ್ರೀನಿವಾಸ ತೈಲಂಗ ಅನೇಕ ಬ್ರಾಹ್ಮಣ ಸಮಾಜದ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.