ADVERTISEMENT

ಸಂಸ್ಕೃತಿಯ ಕಲಾ ಪ್ರಕಾರ ಉಳಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:47 IST
Last Updated 4 ಏಪ್ರಿಲ್ 2013, 6:47 IST

ಶಿರಹಟ್ಟಿ: ಭಾರತೀಯ ಸಂಸ್ಕೃತಿಯ ಕಲಾ ಪ್ರಕಾರಗಳನ್ನು ಉಳಿಸಿ ಬೆಳಸಬೇಕು ಎಂದು ವರವಿ ಮೌನೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಚಂದ್ರಕಾಂತ ಸೋನಾರ ಹೇಳಿದರು.

ಮಂಗಳವಾರ ತಾಲ್ಲೂಕಿನ ವರವಿ ಮೌನೇಶ್ವರ ದೇವಸ್ಥಾನ ಆವರಣದಲ್ಲಿ ನಾಗಪುರ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ಸಹಯೋಗದಲ್ಲಿ ಆರು ರಾಜ್ಯಗಳ ನೂರು ಜನ ಕಲಾವಿದರ ವಿವಿಧ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಕರು ಸಂಘಟಿತರಾಗಿ ಜಾನಪದ ಕಲಾ ಪ್ರಕಾರವನ್ನು ಕಲಿಯುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಭಾರತೀಯ ಕಲೆಗೆ ಅಪಾರ ಬೇಡಿಕೆ ಇದೆ. ಪಾಶ್ಚಾತ್ಯರು ಸಹ ನಮ್ಮ ದೇಶದ ಜಾನಪದ ಮತ್ತು ಸಾಹಿತ್ಯಕ್ಕೆ ಮಾರು ಹೋಗಿದ್ದಾರೆ ಎಂದರು.

ನಾಗಪುರ ಕಾರ್ಯಕ್ರಮದ ಅಧಿಕಾರಿ ಗೋಪಾಲ ಬೆತ್‌ವರ ಮಾತನಾಡಿ,  ದೈಹಿಕ ಶ್ರಮದಿಂದ ಕಲೆ ವ್ಯಕ್ತ ಡಿಸುವುದರಿಂದ  ಮನುಷ್ಯ ಆರೋಗ್ಯ ಯುತದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ವಿವಿಧ ಸಂಸ್ಕೃತಿಗಳ ತವರು ಎಂದೇ ಪ್ರಖ್ಯಾತಿ ಪಡೆದ ಭಾರತ ದೇಶದಲ್ಲಿ ಎಲ್ಲ ರಾಜ್ಯಗಳ ಸಾಹಿತ್ಯ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುವ ಕಾರ್ಯ ನಡೆಯಬೇಕು. ಎಲ್ಲ ರಾಜ್ಯಗಳ ಇತಿಹಾಸವನ್ನು ಅರಿಯಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ವರವಿ ವಿರುಪಾಕ್ಷ ಶ್ರೀಗಳು ಮಾತನಾಡಿ, ಭಾರತೀಯ ಕಲೆ ಅಪಾರವಾದದ್ದು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಗೌರವ ಕಾಪಾಡಿಕೊಂಡು ಬಂದಿದೆ. ಅದನ್ನು ಇಂದಿನ ಯುವಕರು ಉಳಿಸಿ ಬೆಳಿಸಿ ಪ್ರೋತ್ಸಾಹಿಸಬೇಕು. ಮುಂದಿನ ಜನಾಂಗಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಇಂಥ ಕಲೆಗಳು ಅವಕಾಶ ಕಲ್ಪಿಸಿ ಕೊಡುತ್ತವೆ. ಆದ್ದರಿಂದ ದೇಶದ  ಸಾಂಸ್ಕೃತಿಕ, ಪರಂಪರೆ, ಇತಿಹಾಸ ಅರಿಯಲು ಸಾಧ್ಯವಾಗುತ್ತದೆ  ಎಂದರು.

ಮಹಾರಾಷ್ಟ್ರದ ಲಾವಣಿ ನೃತ್ಯ, ಭಾರೂಡ ಮತ್ತು ಗೊದಳ ನೃತ್ಯ, ರಾಜಸ್ತಾನದ ಘಮರು  ಮತ್ತು ಕಾಲಬೇರಿಯಾ ನೃತ್ಯ, ಭವಯಿ ನೃತ್ಯ, ಕರ್ನಾಟಕದ ಡೊಳ್ಳು ಕುಣಿತ, ಗುಜರಾತ ಸಿದ್ದಿ ಘಮಾಲ ನೃತ್ಯ, ಛತ್ತೀಸ್‌ಗಡದ ಪಂತಿ ನೃತ್ಯ, ಓರಿಸ್ಸಾದ ಛಾವೂ ನೃತ್ಯ, ಪ್ರೇಕ್ಷಕರ ಮನಸೊರೆಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.