ADVERTISEMENT

ಸಚಿವ ಪಾಟೀಲರಿಂದ ಸಮವಸ್ತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 9:40 IST
Last Updated 24 ಮಾರ್ಚ್ 2011, 9:40 IST

ನರಗುಂದ: ಪಟ್ಟಣದ ಪುರಸಭೆಯ ಎಸ್‌ಎಫ್‌ಸಿ ಶೇ 22ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಗೃಹೋಪಯೋಗಿ ಹಾಗೂ ಮಕ್ಕಳಿಗೆ ಸಮವಸ್ತ್ರ ಹಾಗೂ ಆಟದ ಸಾಮಗ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.22ರಷ್ಟು ಎಸ್‌ಎಫ್‌ಸಿ ಅನುದಾನದಲ್ಲಿ 55 ಫಲಾನುಭವಿಗಳಿಗೆ ರೂ.3 ಲಕ್ಷದಲ್ಲಿ ಹೊಲಿಗೆ ಯಂತ್ರ, 4 ಫಲಾನುಭವಿಗಳಿಗೆ 1 ಲಕ್ಷರೂ ವೆಚ್ಚದಲ್ಲಿ ಚರ್ಮಕುಟೀರ, 300 ಫಲಾನುಭವಿಗಳಿಗೆ 5 ಲಕ್ಷದಲ್ಲಿ ಗೃಹೋಪಯೋಗಿ ಸಾಮಗ್ರಿ ವಿತರಣೆ ಹಾಗೂ 36 ಲಕ್ಷರೂ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು. 

 ಮತಕ್ಷೇತ್ರದ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಆರು ಕೋಟಿ ರೂಪಾಯಿಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಪಟ್ಟಣದ ಸೋಮಾಪುರ ಕೆರೆಗೆ ರೂ.40 ಲಕ್ಷ, ಪಡುವನಗೊಂಡ ಕೆರೆಗೆ ರೂ. 65 ಲಕ್ಷ ಬಳಕೆ ಮಾಡಲಾಗುವುದು. ಮತಕ್ಷೇತ್ರದ ಕೆರೆಗಳನ್ನು ಈ ಅನುದಾನದ ಮೂಲಕ ಸುಸಜ್ಜಿತವಾಗಿ ನಿರ್ಮಿಸಲಾಗುವುದೆಂದರು. ಪಟ್ಟಣದ ಹಾಳಾದ ರಸ್ತೆಗಳಿಗೆ ಪುನರ್ ನಿರ್ಮಿಸಿ ಡಾಂಬರೀಕರಣ ಮಾಡಲು ಸರಕಾರ 5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದರು.

ಪುರಸಭೆ ಅಧ್ಯಕ್ಷೆ ಮಹಬೂಬಿ ಮಟಗೇರ ಅಧ್ಯಕ್ಷೆತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯರಾದ ವಸಂತ ಜೋಗಣ್ಣವರ, ಪ್ರಕಾಶ ಪಟ್ಟಣಶೆಟ್ಟಿ, ವಿಠ್ಠಲ ಮುಧೋಳೆ, ಚಂದ್ರಶೇಖರ ಕೋಟಿ, ಮಲ್ಲವ್ವ ಗುಂಜಳ, ಶೈಲಾ ನರಗುಂದ, ಉಮೇಶ ಯಮೋಜಿ, ದೇವರಡ್ಡಿ ವೆಂಕರೆಡ್ಡಿಯವರ, ಹಸನಸಾಬ ಮಟಗೇರ ಇತರರು ಹಾಜರಿದ್ದರು.
ಮುಖ್ಯಾಧಿಕಾರಿ ಅಶೋಕ ಪಾಲನಕರ ಸ್ವಾಗತಿಸಿದರು. ವಿಠ್ಠಲ ಹಡಗಲಿ ನಿರೂಪಿಸಿದರು. ಎಂ.ಬಿ. ಪಿಡ್ಡನಾಯ್ಕರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.