ಮುಂಡರಗಿ: ತಾಲ್ಲೂಕಿನಲ್ಲಿ ಕಾರ್ಯಾ ರಂಭ ಮಾಡಲಿರುವ ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆ ಯಿಂದ ಮುಂಡರಗಿ ತಾಲ್ಲೂಕಿನ ಭಾಗಶಃ ರೈತರಿಗೆ ಸಂಪೂರ್ಣ ಅನ್ಯಾಯ ವಾಗಲಿದ್ದು, ಅದನ್ನು ಸರಿಪಡಿಸುವವ ರೆಗೂ ನೀರಾವರಿ ಯೋಜನೆಯ ಸಂಪೂರ್ಣ ಕಾಮಗಾರಿಯನ್ನು ಸ್ಥಗಿತ ಗೊಳಿಸಿ ಉಗ್ರ ಪ್ರತಿಭಟನೆ ನಡೆಸಲಾ ಗುವುದು ಎಂದು ಮಾಜಿ ಸಚಿವ ಎಸ್. ಎಸ್.ಪಾಟೀಲ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅಧಿಕಾರಿಗಳು ರೂಪಿಸಿರುವ ನೂತನ ಯೋಜನೆಯ ನೀಲನಕ್ಷೆಯ (ಮ್ಯಾಪ್) ಪ್ರಕಾರ ತಾಲ್ಲೂಕಿನ ಭಾಗಶಃ ಹಳ್ಳಿಗಳು ಹುಲಿ ಗುಡ್ಡ ಏತ ನೀರಾವರಿ ಯೋಜನೆಯಿಂದ ಸಂಪೂರ್ಣವಾಗಿ ವಂಚಿತವಾಗಲಿವೆ~ ಎಂದು ಆರೋಪಿಸಿದರು.
1992ರಲ್ಲಿ ಪ್ರಾರಂಭವಾಗಿರುವ ಸಿಂಗಟಾಲೂರ-ಹುಲಿಗುಡ್ಡ ಏತ ನೀರಾವರಿ ಯೋಜನೆಯ ಪ್ರಕಾರ ಮುಂಡರಗಿ ತಾಲ್ಲೂಕಿನ ಶೇ 90ರಷ್ಟು ಭಾಗದ ಜಮೀನಿಗೆ ನೀರು ಸರಬರಾಜು ಮಾಡಬೇಕಿತ್ತು. ಆದರೆ ಅಧಿಕಾರಿಗಳು ನೂತನವಾಗಿ ರೂಪಿಸಿರುವ ಯೋಜನೆ (ಮ್ಯಾಪ್) ಪ್ರಕಾರ ತಾಲ್ಲೂಕಿನ ಪ್ರಮುಖ ಮತ್ತು ಫಲವತ್ತಾದ ಗ್ರಾಮ ಗಳನ್ನೆಲ್ಲ ಕಡೆಗಣಿಸಿ ದೂರದ ಗದುಗಿನ ಭಾಗಶಃ ಹಳ್ಳಿಗಳಿಗೆ ನೀರು ಪೂರೈಕೆ ಯಾಗುವಂತೆ ಯೋಜನೆ ಹಾಕಿಕೊಳ್ಳ ಲಾಗಿದೆ ಎಂದು ಅವರು ತಿಳಿಸಿದರು.
ಶಿಂಗಟಾಲೂರ-ಹುಲಿಗುಡ್ಡ ಏತ ನೀರಾವರಿ ಯೋಜನೆಯು ವಾಸ್ತವ ವಾಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಪ್ರಾರಂಭವಾಗಿದ್ದು, ಬೃಹತ್ ಯೋಜ ನೆಗಾಗಿ ತಾಲ್ಲೂಕಿನ ರೈತರು ತಮ್ಮ ಫಲವತ್ತಾದ ಜಮೀನು, ಮನೆ, ಮಠ, ಗ್ರಾಮಗಳನ್ನು ತ್ಯಾಗ ಮಾಡಿದ್ದಾರೆ. ಆ ಕಾರಣದಿಂದ ಮುಂಡರಗಿ ತಾಲ್ಲೂಕಿನ ರೈತರಿಗೆ ಮೊದಲು ನೀರಾವರಿ ಯೋಜ ನೆಯ ಸದುಪಯೋಗ ದೊರೆಯಬೇಕು ಎಂದು ಅವರು ಒತ್ತಾಯಿಸಿದರು.
1992ರಲ್ಲಿ ಕೇವಲ 7.5 ಟಿಎಂಸಿ ಸಾಮರ್ಥ್ಯದ ನೀರು ಸಂಗ್ರಹಕ್ಕೆ ಮಾತ್ರ ಅವಕಾಶವಿದ್ದ ನೀರಾವರಿ ಯೋಜನೆ ಯನ್ನು ನಂತರ ಬದಲಿಸಿ ಪ್ರಸ್ತುತ 18 ಟಿಎಂಸಿ ಸಾಮರ್ಥ್ಯಕ್ಕೆ ಹೆಚ್ಚಿಸಲಾಗಿದೆ. ಅದಕ್ಕೆ ಅನುಗುಣವಾಗಿ ಮುಂಡರಗಿ ತಾಲ್ಲೂಕಿನ ಎಲ್ಲ ಭಾಗಕ್ಕೂ ನೀರು ಪೂರೈಕೆಯಾಗಬೇಕು. ಆದರೆ ಅಧಿಕಾರಿ ಗಳ ಬೇಜವಾಬ್ದಾರಿ ಮತ್ತು ಮುಂಡ ರಗಿ ತಾಲ್ಲೂಕಿನ ರೈತರ ಮುಗ್ಧತೆಗಳನ್ನು ದುರುಪಯೋಗ ಮಾಡಿಕೊಂಡು ಯೋಜನೆಯ ಲಾಭ ಮುಂಡರಗಿ ತಾಲ್ಲೂಕಿಗೆ ತಲುಪದಂತೆ ಷಡ್ಯಂತರ ರೂಪಿಸಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ರೂಪಿಸಿರುವ ನೂತನ ಯೋಜನೆಯನ್ನು ಸಂಪೂರ್ಣ ವಾಗಿ ಕೈಬಿಟ್ಟು ಮುಂಡರಗಿ ತಾಲ್ಲೂಕಿನ ಎಲ್ಲ ರೈತರ ಜಮೀನಿಗೂ ನೀರು ಪೂರೈಕೆ ಯಾಗುವಂತೆ ಹೊಸ ಯೋಜನೆಯನ್ನು ರೂಪಿಸಬೇಕು. ಅಲ್ಲಿಯವರೆಗೂ ತಾಲ್ಲೂಕಿನ ಯಾವ ಭಾಗದಲ್ಲಿಯೂ ನೀರಾವರಿ ಯೋಜನೆಯ ಕಾಮಗಾರಿ ಯನ್ನು ಪ್ರಾರಂಭಿಸಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.
ಈ ನೀರಾವರಿ ಯೋಜನೆಯು ಈ ಭಾಗದ ಸಮಗ್ರ ರೈತರ ಜೀವನಾಡಿಯಾ ಗಲಿದ್ದು, ಅದರ ಅನುಷ್ಠಾನಕ್ಕೆ ತಾವೂ ಪ್ರಾಣ ಕೊಡಲೂ ಸಿದ್ಧರಿದ್ದೇವೆ. ತಾಲ್ಲೂ ಕಿಗೆ ಸಂಬಂಧಿಸಿದ ಇಬ್ಬರು ಸಚಿವರು, ವಿಧಾನ ಪರಿಷತ್ ಸದಸ್ಯರು ತಕ್ಷಣ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಹೇಮ ಗಿರೀಶ ಹಾವಿನಾಳ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಮುಖಂಡರಾದ ಎಚ್.ಆರ್.ನಾಯಕ, ಡಿ.ಸಿ.ಪಾಟೀಲ, ಗುಂಡಪ್ಪ ತಿಗರಿ, ತಾಪಂ ಮಾಜಿ ಅಧ್ಯಕ್ಷ ಪಿ.ಎಸ್. ಬಾಗೇವಾಡಿ, ತಾಪಂ ಉಪಾಧ್ಯಕ್ಷ ಪಿ.ಎಂ.ಪಾಟೀಲ, ಸದಸ್ಯ ರಾದ ರಾಮಾಂಜನೇಯ ಪೆನ್ಮತ್ಸಾ, ನಿಂಗ ಬಸಪ್ಪ ಪ್ಯಾಟಿ, ಮುಖಂಡರಾದ ಎಂ. ಯು.ಮಂಕಾಂದಾರ, ಬಸವರಾಜ ರಾಮೇನಹಳ್ಳಿ, ಅಲ್ಲಾಭಕ್ಷಿ ಬೆಟಗೇರಿ, ಡಿ.ಎಂ.ಕಾತರಕಿ ಇತರರು ಹಾಜರಿದ್ದು, ನೀರಾವರಿ ಯೋಜನೆಯಲ್ಲಿ ತಾಲ್ಲೂಕಿಗೆ ಉಂಟಾಗಿ ರುವ ಅನ್ಯಾಯವನ್ನು ಸರಿಪಡಿಸಲು ತಾವೆಲ್ಲ ಪಕ್ಷಾತೀತವಾಗಿ ಹೋರಾಟಕ್ಕೆ ಸಿದ್ಧ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.