ಗದಗ: ರೈತರು ಹಾಗೂ ಸಾರ್ವಜನಿಕ ರೊಂದಿಗೆ ಸಹಕಾರ ಮನೋಭಾವನೆ ಯೊಂದಿಗೆ ವ್ಯವಹರಿಸಿದಲ್ಲಿ ಸಂಘ-ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತವೆ ಎಂದು ಧಾರವಾಡ ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಐ.ಎಸ್.ಪಾಟೀಲ ಹೇಳಿದರು.
ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಗುರುವಾರ ರಾಜ್ಯ ಸಹ ಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಇಲಾಖೆ ಹಾಗೂ ಧಾರವಾಡ ಹಾಲು ಒಕ್ಕೂಟದ ಆಶ್ರಯದಲ್ಲಿ ರೋಣ ಹಾಗೂ ಶಿರಹಟ್ಟಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಕೃಷಿ ಹಾಗೂ ಇತರೇ ಸ್ವ ಉದ್ಯೊಗದೊಂದಿಗೆ ಹಾಲು ಉತ್ಪಾ ದನಾ ಉದ್ಯಮವನ್ನು ಹೆಚ್ಚಾಗಿ ಅಳ ವಡಿಸಿಕೊಂಡಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಗೆ ಆರ್ಥಿಕ ಮುಗ್ಗಟ್ಟು ಹೊಡೆದೊಡಿಸಲು ಸಹಕಾರಿಯಾಗಿದ್ದು, ಹೈನು ಉತ್ಪಾದನೆ ಅಳವಡಿಸಿ ಕೊಳ್ಳುವಂತೆ ಜನರಿಗೆ ಜಾಗೃತಿ ಮೂಡಿ ಸುವುದು ಅವಶ್ಯ. ಸರ್ಕಾರದ ಯೋಜನೆ ಗಳನ್ನು ರೈತರು ಸದುಪಯೋಗ ಪಡೆದು ಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸಿ ಕೊಳ್ಳಬೇಕು ಎಂದರು.
ಗ್ರಾಹಕರ ಅನುಕೂಲಕ್ಕಾಗಿ ಕೆ.ಸಿ.ಸಿ ಬ್ಯಾಂಕ್ ಕೋರ್ ಬ್ಯಾಂಕಿಂಗ್ ಸೌಲಭ್ಯ ಜಾರಿಗೆ ತಂದಿದೆ. ಬ್ಯಾಂಕ್‌ನಿಂದ ಶೇಕಡಾ 3ರಷ್ಟು ಬಡ್ಡಿದರದಲ್ಲ್ಲಿ ಆಕಳು ಸಾಲ, ಮಹಿಳಾ ಸಂಘಗಳಿಗೆ ಶೇಕಡಾ ರೂ. 4 ಬಡ್ಡಿ ಸಾಲದ ಜತೆಗೆ ಹಲವು ರೀತಿಯ ಸಾಲ, ಸೌಲಭ್ಯ ನೀಡಲಾ ಗುತ್ತಿದೆ ಎಂದು ವಿವರಿಸಿದರು.
ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮಚಂದ್ರ ಭಟ್ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದ್ದೇವೆ. ಈ ವರ್ಷ ಪ್ರತಿ ತಿಂಗಳಿಗೆ 2 ಲಕ್ಷ ಲೀಟರ್ ಹಾಲು ಉತ್ಪಾದನೆಯ ಗುರಿ ಹೊಂದಿದ್ದು, ಕಳೆದ ತಿಂಗಳಲ್ಲಿ 1 ಲಕ್ಷ 60 ಸಾವಿರ ಲೀಟರ್ ಹಾಲು ಉತ್ಪಾದಿಸಲಾಗಿದ್ದು, ಇದರಲ್ಲಿ 90 ಸಾವಿರ ಲೀಟರ್ ಹಾಲನ್ನು ರಾಜ್ಯದಲ್ಲಿ ಮಾರಾಟ ಮಾಡ ಲಾಗುತ್ತಿದೆ. 50 ಸಾವಿರ ಲೀಟರ್ ಹಾಲನ್ನು ಹೊರರಾಜ್ಯಗಳಿಗೆ ಮಾರಾಟ ಮತ್ತು ಉಳಿದ ಹಾಲನ್ನು ಪೌಡರ್ ತಯಾರಿಸಿ ಮಾರಾಟ ಮಾಡಲಾಗು ತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ನೀಲ ಕಂಠ ಅಸೂಟಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎಸ್.ಪಿ.ಪಾಟೀಲ ಮಾತನಾ ಡಿದರು. ಎಚ್.ಜಿ.ಹಿರೇಗೌಡ್ರ, ಸಾವಿತ್ರಿ ಕಡಿ, ಎಸ್.ಬಿ.ಹಿರೇಮಠ, ಎಂ.ಎಸ್. ಕಲ ಗುಡಿ, ಸಿ.ಎಂ.ಪಾಟೀಲ, ಬಿ.ವಿ. ಪಾಟೀಲ, ಎಸ್.ವಿ.ಯಂಡಿಗುಡಿ, ಪ್ರಶಾಂತ ಮುಧೊೋಳ, ಪಿ.ಎಸ್.ಆಶಿ, ಎಚ್.ಎನ್.ಬಸವರಾಜ, ಜಿ.ಎಸ್. ಸಾಲೋಟಗಿ, ರೋಣ ಶಿರಹಟ್ಟಿ ತಾಲ್ಲೂಕಿನ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪಾಲ್ಗೊಂ ಡಿದ್ದರು. ಎಂ.ವಿ. ಮಡಿವಾಳರ ಸ್ವಾಗತಿಸಿ ದರು. ನಾಗರಾಜ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.