ADVERTISEMENT

‘ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 4:35 IST
Last Updated 18 ಡಿಸೆಂಬರ್ 2013, 4:35 IST

ನರಗುಂದ: ಗೋಮಾತೆ ದೇವತೆಗಳಿಗೆ ಸಮಾನವಾಗಿದೆ. ಅದಕ್ಕೆ  ಹಿಂಸೆ ಮಾಡಿದರೆ ದೇವತೆಗಳಿಗೆ ಹಿಂಸೆ ಮಾಡಿ ದಂತೆ.  ಗೋ ಹತ್ಯೆ ಮಹಾಪಾಪ ವಾಗಿದೆ. ಆದ್ದರಿಂದ ಕೇಂದ್ರ ಸರಕಾರ ಹಾಗೂ  ರಾಜ್ಯ ಸರಕಾರ ಮೀನಾ ಮೇಷ ಮಾಡದೇ ಗೋಹತ್ಯೆ ನಿಷೇಧ ಕಾಯ್ದೆ ಕೂಡಲೇ  ಜಾರಿಮಾಡಬೇಕು  ಎಂದು ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿಯ ಲಿಂಗಾನಂದ ಸ್ವಾಮೀಜಿ ಆಗ್ರಹಿಸಿದರು.

ಸೋಮವಾರ ಸಂಜೆ ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತ ಮಠದ ಆಶ್ರಯದಲ್ಲಿ ನಡೆದ  221ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಹಸ್ರ ಸಹಸ್ರ ಹಸುಗಳ ಮಾರಣ ಹೋಮ ನಡೆಯುತ್ತಿರುವುದು ದುರ ದೃಷ್ಟಕರವಾಗಿದೆ. ಆಕಳು ಹೊಟ್ಟೆಯಲ್ಲಿ ಅಚ್ಚೇರು ಬಂಗಾರ ಎಂಬಂತೆ ಒಂದು ಹಸು ಒಂದು ವರ್ಷಕ್ಕೆ  ಅಚ್ಚೇರು ಬಂಗಾರದ ಮೌಲ್ಯದಷ್ಟು ಉತ್ಪನ್ನ ಗಳನ್ನು   ನೀಡುತ್ತದೆ. ಇಂಥಹ ಪವಿತ್ರ ವಾದ  ಗೋಹತ್ಯೆ ತಡೆಯಬೇಕು ಎಂದರು.

ಉಪನ್ಯಾಸ ನೀಡಿದ  ಬನಹಟ್ಟಿ ಚಂದ್ರಶೇಖರಯ್ಯ ಹಿರೇಮಠ ಸಮಾಜ  ಸ್ವಾಸ್ಥ್ಯ  ಕಾಪಾಡುವ ಕಾಯಕ ಮಠಗಳ ಮೇಲೆ ನಿಂತಿದೆ. ಕಾಯಾ ವಾಚಾ ಮನಸಾ ನಡೆದುಕೊಳ್ಳಬೇಕೆಂದು  ಹೇಳಿ ದರು. ಸಮ್ಮುಖ ವಹಿಸಿದ ಅಮರಗೋಳದ ಸಿದ್ಧಾರೂಡ ಮಠದ ಸ್ವಾಮೀಜಿ, ನೇತೃತ್ವ ವಹಿಸಿ ಶಾಂತಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿ  ಸೊಲಬಯ್ಯ ಸ್ವಾಮೀಜಿ ಮಾತನಾಡಿದರು. 

  ಮಲ್ಲಮ್ಮ ಆನಂದ್ರಭಾವಿ ಸ್ಮರಣಾರ್ಥ ಪಿ.ಎಫ್‌. ಆನಂದ್ರಭಾವಿ ಗೋದಾನ ಮಾಡಿದರು.   ವಿರೇಶ್ವರ ದೇವರು, ಹುಬ್ಬಳ್ಳಿಯ ಮುಖ್ಯ ಶಿಕ್ಷಕ ಜಿ.ಬಿ. ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ಲಕ್ಷ್ಮಣ ನಿಂಗೋಜಿ, ಪಿ.ಎಫ್‌. ಆನಂದ್ರಬಾವಿ, ಚಿದಂಬರ ನಿಂಬರಗಿ, ಡಾ.ವೈ.ಎಂ. ಹಡಪದ, ಡಾ,ಮಲ್ಲಿ ಕಾರ್ಜುನ ಶಾಲದಾರ,  ರಾಮಣ್ಣ ತುರಾರಿ, ನಾಗಪ್ಪ ಹಡಪದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.