ADVERTISEMENT

ಗದಗ: ಜಿಲ್ಲೆಯಲ್ಲಿ 39 ಮಂದಿಗೆ ಕೋವಿಡ್‌ ಸೋಂಕು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 16:28 IST
Last Updated 15 ಸೆಪ್ಟೆಂಬರ್ 2020, 16:28 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಗದಗ: ಜಿಲ್ಲೆಯಲ್ಲಿ ಮತ್ತೆ 39 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

ಗದಗ ತಾಲ್ಲೂಕಿನಲ್ಲಿ 12, ಮುಂಡರಗಿ 5, ನರಗುಂದ 5, ರೋಣ 11, ಶಿರಹಟ್ಟಿ 5 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಸೋಂಕು ದೃಢಪಟ್ಟ ಪ್ರದೇಶಗಳು:ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ ಹುಡ್ಕೋ ಕಾಲೊನಿ, ಬ್ಯಾಂಕರ್ಸ್‌ ಕಾಲೊನಿ, ಜಿಮ್ಸ್‌, ಭೂಮರೆಡ್ಡಿ ವೃತ್ತ, ಕಳಸಾಪುರ ರಸ್ತೆ, ಶಿವಾನಂದ ನಗರ, ಮುಳಗುಂದ ರಸ್ತೆ, ಗದಗ ತಾಲ್ಲೂಕಿನ ಕಳಸಾಪುರ, ಚಿಕ್ಕ ಹಂದಿಗೋಳ, ನಾಗಾವಿ ತಾಂಡಾ, ಹೊಂಬಳ.

ಮುಂಡರಗಿ ಪಟ್ಟಣದ ಬಸ್‌ ನಿಲ್ದಾಣದ ರಸ್ತೆ, ಮುಂಡರಗಿ ತಾಲ್ಲೂಕಿನ ಚುರ್ಚಿಹಾಳ, ಹಾರೋಗೇರಿ, ನರಗುಂದ ತಾಲ್ಲೂಕಿನ ಸೋಮಾಪುರ, ಕೊಣ್ಣೂರ, ಸುರಕೋಡ.

ADVERTISEMENT

ರೋಣ ಪಟ್ಟಣದ ವೀರಾಪುರ ಓಣಿ, ವಿವೇಕಾನಂದ ನಗರ, ರೋಣ ತಾಲ್ಲೂಕಿನ ಅಬ್ಬಿಗೇರಿ, ನರೇಗಲ್, ಇಟಗಿ, ಯಾವಗಲ್, ಸವಡಿ, ಶಿರಹಟ್ಟಿ ತಾಲ್ಲೂಕಿನ ಹರಿಪುರ, ಬನ್ನಿಕೊಪ್ಪ, ಲಕ್ಷ್ಮೇಶ್ವರ, ಶಿಗ್ಲಿಯಲ್ಲಿ ಪ್ರಕರಣಗಳು ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.