ರೋಣ : ತಾಲ್ಲೂಕಿನಾದ್ಯಂತ ಇದುವರೆಗೂ 10 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ರೋಣ ನಗರದಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ ಹಾದಿಮನಿ, ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣಗಳು ವರದಿಯಾಗಿದ್ದು, ನಗರದಲ್ಲಿ ಪರಿಣಾಮಕಾರಿ ಲಾರ್ವಾ ಸಮೀಕ್ಷೆ ನಡೆಸಬೇಕೆಂಬ ತೀರ್ಮಾನ ಕೈಗೊಂಡಿದ್ದು, 52 ತಂಡಗಳನ್ನು ರಚಿಸಲಾಗಿದೆ. ಕುಡಿಯಲಾರದ ನೀರಿಗೆ ಲಾರ್ವಾ ನಾಶಕ ದ್ರಾವಣ ಹಾಕಲು ಸೂಚಿಸಲಾಗಿದೆ. ದೊಡ್ಡ ಪ್ರಮಾಣದ ನೀರಿನ ಸಂಗ್ರಹಗಳಲ್ಲಿನ ಲಾರ್ವಾಗಳನ್ನು ನಿರ್ಮೂಲಗೊಳಿಸಲು ಜೈವಿಕ ವಿಧಾನವಾದ ಗ್ಯಾಂಬೂಸಿಯ ಮತ್ತು ಗೊಪ್ಪಿ ಮೀನುಗಳನ್ನು ಬಿಡಲು ಸಮೀಕ್ಷೆ ಮಾಡಲಾಗುತ್ತಿದೆ’ ಎಂದರು.
ರೋಣ ತಹಶೀಲ್ದಾರ್ ಕೆ ನಾಗರಾಜ, ಆಡಳಿತ ವೈದ್ಯಾಧಿಕಾರಿ ಅರವಿಂದ ಕಂಬಳಿ, ವೈದ್ಯಾಧಿಕಾರಿಗಳಾದ ಮಹೇಶ್ ಹೊಸಕೆರೆ, ಸುನೀಲ ಸಾರಂಗಮಠ, ಮೀನಾಕ್ಷಿ ಜಾದವ ಸೇರಿದಂತೆ ಆರೋಗ್ಯ ಇಲಾಖೆ, ರೋಣ ತಾಲ್ಲೂಕು ಪಂಚಾಯಿತಿ ಮತ್ತು ರೋಣ ಪುರಸಭೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.