ADVERTISEMENT

ಅಬ್ಬಿಕೆರೆ ದೋಣಿ ವಿಹಾರಕ್ಕೆ ಚಾಲನೆ: ಸಮಗ್ರ ಅಭಿವೃದ್ಧಿಗೆ ಕ್ರಮ; ಎಚ್.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 2:43 IST
Last Updated 20 ಅಕ್ಟೋಬರ್ 2025, 2:43 IST
ಮುಳಗುಂದ ಅಬ್ಬಿಕೆರೆ ದೋಣಿ ವಿಹಾರವನ್ನು ಭಾನುವಾರ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಿದರು 
ಮುಳಗುಂದ ಅಬ್ಬಿಕೆರೆ ದೋಣಿ ವಿಹಾರವನ್ನು ಭಾನುವಾರ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಿದರು    

ಮುಳಗುಂದ: ಇಲ್ಲಿಯ ಐತಿಹಾಸಿಕ ಅಬ್ಬಿಕೆರೆ ದೋಣಿ ವಿಹಾರಕ್ಕೆ ಸಚಿವ ಎಚ್.ಕೆ. ಪಾಟೀಲ ಭಾನುವಾರ ಚಾಲನೆ ನೀಡಿದರು.

‘ಪಟ್ಟಣವು ಹಲವು ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿದೆ, ಪ್ರವಾಸಿ ತಾಣ ನಿರ್ಮಿಸುವ ಉದ್ದೇಶದಿಂದ ಅಬ್ಬಿಕೆರೆ ಸಮಗ್ರ ಅಭಿವೃದ್ದಿಗೆ ಕೈಗೊಳ್ಳಲಾಗಿದೆ. ಅಪೂರ್ಣ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವದು’ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಯಲ್ಲವ್ವ ಕವಲೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌, ಎಸ್‍ಪಿ ರೋಹನ್ ಜಗದೀಶ, ಪಟ್ಟಣ ಪಂಚಾಯಿತಿ ಸದಸ್ಯ ಎನ್.ಆರ್. ದೇಶಪಾಂಡೆ, ಕೆ.ಎಲ್. ಕರೇಗೌಡ್ರ, ಎಸ್.ಸಿ. ಬಡ್ನಿ, ವಿಜಯ ನೀಲಗುಂದ, ಇಮಾಮಸಾಬ ಶೇಖ, ಮಹಾದೇವಪ್ಪ ಗಡಾದ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಸುಂಕಾಪೂರ, ಎಸ್.ಎಂ. ನೀಲಗುಂದ, ಸಿದ್ದು ಪಾಟೀಲ, ಪ್ರಭು ಬುರಬುರೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.