ADVERTISEMENT

ವಚನಗಳ ಗಂಭೀರ ಅಧ್ಯಯನಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 13:09 IST
Last Updated 1 ಸೆಪ್ಟೆಂಬರ್ 2023, 13:09 IST
ಮುಂಡರಗಿಯ ಭಜಂತ್ರಿ ಓಣಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸಿದರು
ಮುಂಡರಗಿಯ ಭಜಂತ್ರಿ ಓಣಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸಿದರು   

ಮುಂಡರಗಿ: ಶರಣ ನುಲಿಯ ಚಂದಯ್ಯನವರು ಹಗ್ಗ ಹೊಸೆಯುವ ಕಾಯಕದ ಜೊತೆ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಉದಾತ್ತ ಚಿಂತನೆಗಳನ್ನು ಒಳಗೊಂಡಿದ್ದ ಅವರ ವಚನಗಳು ವಿಶ್ವಮಾನ್ಯವಾಗಿದ್ದವು. ಯುವಕರು ಶರಣರ ವಚನಗಳನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಭಜಂತ್ರಿ ಓಣಿಯಲ್ಲಿ ಆದಿಶಕ್ತಿ ಹುಲಿಗೆಮ್ಮ ದೇವಿ ಕೊರಮ ಕ್ಷೇಮಾಭಿವೃದ್ಧಿ ಸಂಘ, ಶಿವಶರಣ ನುಲಿಯ ಚಂದಯ್ಯ ಯುವಕ ಸಂಘ, ಅಖಿಲ ಕರ್ನಾಟಕ ಕೊರಮರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಪ್ರದೇಶ ಕೊರಮರ ಸಂಘಗಳು ಗುರುವಾರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶಿವಶರಣ ನುಲಿಯ ಚಂದಯ್ಯನವರ ಜಯಂತಿಯಲ್ಲಿ ಅವರು ಮಾತನಾಡಿದರು.

ಭಜಂತ್ರಿ, ಕೊರಮ ಸಮಾಜವು ದುಡಿಮೆಯನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಕೊರಮ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಕೆಪಿಸಿಸಿ ಕಾರ್ಯದರ್ಶಿ ವೈ.ಎನ್ .ಗೌಡರ್ ಮಾತನಾಡಿದರು. ಕೊರಮ ಸಮಾಜದ ಯುವ ಮುಖಂಡ ರಾಮು ಭಜಂತ್ರಿ, ನಿಂಗರಾಜ ಹಾಲಿನವರ ಇದ್ದರು.

ಕರಬಸಪ್ಪ ಹಂಚಿನಾಳ, ಫಾಲಾಕ್ಷಿ ಗಡದಿನ್ನಿ, ನಾಗರಾಜ ಹೊಂಬಳಗಟ್ಟಿ, ಕವಿತಾ ಉಳ್ಳಾಗಡ್ಡಿ, ರಾಮು ಕಲಾಲ, ರಾಜಾ ಭಕ್ಷಿ ಬೆಟಗೇರಿ, ಮಾರುತಿ ಭಜಂತ್ರಿ, ಮಂಜುನಾಥ ಮುಧೋಳ, ಮುತ್ತು ಬಳ್ಳಾರಿ, ರಾಘವೇಂದ್ರ ಗೌಡ ಪಾಟೀಲ, ಯಮುನಪ್ಪ ಭಜಂತ್ರಿ, ಮುದಿಯಪ್ಪ ಭಜಂತ್ರಿ, ಮಂಜುನಾಥ ಭಜಂತ್ರಿ, ಹನುಮಂತ ಭಜಂತ್ರಿ, ಮಂಜುನಾಥ ಭಜಂತ್ರಿ, ಶಿವಾನಂದ ಭಜಂತ್ರಿ, ಶಿವು ಭಜಂತ್ರಿ, ಸಿದ್ದು ಭಜಂತ್ರಿ, ಧಾನೇಶ್ವರಿ ಭಜಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.