ಲಕ್ಷ್ಮೇಶ್ವರ: ಪಟ್ಟಣದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಹಾಗೂ ಪ್ರತಿಜ್ಞಾ ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಭರತ್ ಯೋಗೀಶ ಕರಗುದರಿ ಉದ್ಘಾಟಿಸಿದರು.
‘ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಬೇಕು. ಮಾನವ ಹಕ್ಕುಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕರು ಜಾಗ್ರತೆ ವಹಿಸಿದಾಗ ಮಾತ್ರ ಮಾನವ ಕಳ್ಳ ಸಾಗಣೆ ತಡೆಯಲು ಸಾಧ್ಯ’ ಎಂದು ತಿಳಿಸಿದರು.
ದಿವಾಣಿ ನ್ಯಾಯಾಧೀಶ ಸತೀಶ ಎಂ. ಮಾತನಾಡಿ, ‘ವಿದ್ಯಾರ್ಥಿಗಳು ಮೋಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೋಹಕ್ಕೆ ಬಲಿಯಾಗದೇ ಓದಿನ ಕಡೆ ಗಮನ ಹರಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದರು.
ವಕೀಲ ಪ್ರಕಾಶ ವಾಲಿ ಮಾತನಾಡಿದರು. ಪ್ರಾಚಾರ್ಯ ಗಂಗಾಧರ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ರಾಮೇಶ್ವರ ಶಿರಹಟ್ಟಿ, ಬಿ.ವಿ. ನೇಕಾರ, ವಿ.ಎಸ್. ಪಶುಪತಿಹಾಳ, ಬಿ.ಎಸ್. ಬಾಳೇಶ್ವರಮಠ, ಬಸೀರ ಅಹ್ಮದ್ ಚೌರಿ, ತೇಜಸ್ವಿನಿ ಅಲ್ಲಯ್ಯನವರಮಠ, ವೀರೇಶ ಶಿರಹಟ್ಟಿ, ಪೂರ್ಣಿಮಾ ಕೊಡ್ಲಿ, ಸೀಮಾ ಪಾಟೀಲ, ಮೇರಿ ಅಂಥೋನಿ, ಸುವರ್ಣ ಹಡಗಲಿ, ಯಲ್ಲಪ್ಪ ಶಿರೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.