ADVERTISEMENT

ಮುಂಡರಗಿ: ಕರಿ ಕೆಂಬರಲು ಪಕ್ಷಿ ರಕ್ಷಿಸಿದ ಪ್ರತಿಭಟನಕಾರರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:32 IST
Last Updated 9 ಜುಲೈ 2025, 4:32 IST
ಮುಂಡರಗಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಪ್ರತಿಭಟನಕಾರರಾದ ಮಹೇಶ ಇದ್ಲಿ, ಸುರೇಶ ಬಳ್ಳಾರಿ ಮತ್ತಿತರರು ಕರಿ ಕೆಂಬರಲು ಪಕ್ಷಿಯನ್ನು ರಕ್ಷಿಸಿ, ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದರು.
ಮುಂಡರಗಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಪ್ರತಿಭಟನಕಾರರಾದ ಮಹೇಶ ಇದ್ಲಿ, ಸುರೇಶ ಬಳ್ಳಾರಿ ಮತ್ತಿತರರು ಕರಿ ಕೆಂಬರಲು ಪಕ್ಷಿಯನ್ನು ರಕ್ಷಿಸಿ, ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದರು.   

ಮುಂಡರಗಿ: ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಗ್ರಾಮೀಣ ಉದ್ಯೋಗ ಖಾತ್ರಿ ಹೊರಗುತ್ತಿಗೆ ನೌಕರರು ಮಂಗಳವಾರ ಸಂಕಷ್ಟಕ್ಕೆ ಸಿಲುಕಿದ್ದ ಕರಿ ಕೆಂಬರಲು ಎಂಬ ಪಕ್ಷಿಯನ್ನು ರಕ್ಷಿಸಿದರು.

ಗಾಳಿಪಟದ ದಾರಕ್ಕೆ ಸಿಲುಕಿ ಗಾಯಗೊಂಡ ಕರಿಕೆಂಬರಲು ಪಕ್ಷಿಯು ಮರವೊಂದಕ್ಕೆ ನೇತಾಡುತ್ತಿರುವುದು ಕಂಡು ಪ್ರತಿಭಟನಕಾರರು ಪ್ರತಿಭಟನೆ ಸ್ಥಗಿತಗೊಳಿಸಿದರು. ಪಕ್ಷಿಯನ್ನು ಕೆಳಗಿಳಿಸಲು ಮತ್ತು ಅದಕ್ಕೆ ಸುತ್ತಿದ್ದ ದಾರವನ್ನು ಬಿಚ್ಚಲು ಅಕ್ಷರ ದಾಸೋಹ ನೌಕರರಾದ ಹುಸೇನ್ ಕಂಕವಾಡ, ಪೀರಸಾಬ ದಂಡಿನ ನೆರವಾದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಪ್ರತಿಭಟನಕಾರರು, ನಂತರ ಪಕ್ಷಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದರು.

‘ಜನ ಜಂಗುಳಿಯಿಂದ ದೂರವಿರುವ ಕರಿ ಕೆಂಬರಲು ಪಕ್ಷಿಯು ಕಪ್ಪತಗುಡ್ಡ ಹಾಗೂ ಸಾಕಷ್ಟು ನೀರಿರುವ ಪ್ರದೇಶದಲ್ಲಿ ವಾಸಿಸುತ್ತವೆ’ ಎಂದು ಮುಂಡರಗಿ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ತಿಳಿಸಿದರು.

ADVERTISEMENT

ಪ್ರತಿಭಟನೆಗೆ ಬೆಂಬಲ: ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆಯ ಅಧ್ಯಕ್ಷ ವೈ.ಎನ್.ಗೌಡರ ಮಂಗಳವಾರ ಭೇಟಿ ನೀಡಿ ಹೊರಗುತ್ತಿಗೆ ನೌಕರರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಹುಸೇನ್ ಕಂಕವಾಡ, ಪೀರಸಾಬ ದಂಡಿನ, ಮಹೇಶ ಇದ್ಲಿ, ಸುರೇಶ ಬಳ್ಳಾರಿ, ವೆಂಕಟೇಶ ಹಾಣಾಪೂರ, ವೀರಯ್ಯ ಅಳವಂಡಿಮಠ, ಗೋಪಾಲ ಹೊಸಮನಿ, ಸಿದ್ದಪ್ಪ ಗುಡಿಮನಿ, ಬೀರಪ್ಪ ಮರೇಗೌಡ್ರ ಲಕ್ಷ್ಮಣ ಜಮಾದಾರ, ಲಕ್ಷ್ಮಣ ಹೊಸಕುರುಬರ, ಶಂಭಯ್ಯ ಡಂಬಳಮಠ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.