ADVERTISEMENT

ಮುಂಡರಗಿ | ಸಮಾನತೆ ನೀಡಿದ ಅಂಬೇಡ್ಕರ್ ಸ್ಮರಣೀಯ: ಎರ್ರಿಸ್ವಾಮಿ ಪಿ.ಎಸ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:09 IST
Last Updated 27 ನವೆಂಬರ್ 2025, 5:09 IST
ಮುಂಡರಗಿಯ ಪುರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರು ಸಂವಿಧಾನ ಪೀಠಿಕೆ ಬೋಧಿಸಿದರು
ಮುಂಡರಗಿಯ ಪುರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರು ಸಂವಿಧಾನ ಪೀಠಿಕೆ ಬೋಧಿಸಿದರು   

ಮುಂಡರಗಿ: ‘ಭಾತರ ಸಂವಿಧಾನ ಜಗತ್ತಿನಲ್ಲೆಯೇ ಶ್ರೇಷ್ಠವಾದ ಸಂವಿಧಾನ. ದೇಶದ ನಾಗರಿಕರಿಗೆ ಸಂವಿಧಾನದ ಮೂಲಕ ಸಮಾನ ಹಕ್ಕು ನೀಡಿದ ಕೀರ್ತಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ತಾಲ್ಲೂಕು ಆಡಳಿತ ವತಿಯಿಂದ ಬುಧವಾರ ಇಲ್ಲಿಯ ಪುರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನದ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಹಾಗೂ ಅಂಬೇಡ್ಕರ್ ಚಿತ್ರದ ಮೆರವಣಿಗೆ ನಡೆಸಲಾಯಿತು.‌ ಡಿಎಸ್ಎಸ್ ಮುಖಂಡ ಸೋಮಣ್ಣ ಹೈತಾಪುರ, ನಿವೃತ್ತ ಉಪನ್ಯಾಸಕ ಸತೀಶ ಪಾಶಿ, ಡಿಎಸ್ಎಸ್ ಮುಖಂಡ ಎಚ್.ಡಿ. ಪೂಜಾರ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಇಒ ವಿಶ್ವನಾಥ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ತಾಲ್ಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ನಾಗರಾಜ ಹೊಂಬಳಗಟ್ಟಿ, ಲಕ್ಷ್ಮಣ ತಗಡಿನಮನಿ, ಬಸವರಾಜ ದೇಸಾಯಿ, ದುರುಗೇಶ ಪುಜಾರ, ಬಸವರಾಜ ನವಲಗುಂದ, ದ್ರುವಕುಮಾರ ಹೂಗಾರ, ಮೈಲೆಪ್ಪ ಕಲಕೇರಿ, ಮಂಜುನಾಥ ಮುಧೋಳ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ ಸ್ವಾಗತಿಸಿದರು. ಶ್ರೀಕಾಂತ ಅರಹುಣಸಿ ಕಾರ್ಯಕ್ರಮ ನಿರೂಪಿಸಿದರು.