ADVERTISEMENT

ಬ್ರಹ್ಮಾನಂದ ಶ್ರೀ ಆರಾಧನಾ ಮಹೋತ್ಸವ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 6:22 IST
Last Updated 28 ಡಿಸೆಂಬರ್ 2025, 6:22 IST
ಬ್ರಹ್ಮಾನಂದ ಸ್ವಾಮೀಜಿ
ಬ್ರಹ್ಮಾನಂದ ಸ್ವಾಮೀಜಿ   

ನರಗುಂದ: ತಾಲ್ಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಬ್ರಹ್ಮಾನಂದ ಸ್ವಾಮೀಜಿ 88ನೇ ಆರಾಧನಾ ಮಹೋತ್ಸವವು ಡಿಸೆಂಬರ್ 29 ಮತ್ತು 30ರಂದು ನಡೆಯಲಿದೆ.

29ರಂದು ರಾತ್ರಿ 8 ಗಂಟೆಯಿಂದ ವಿವಿಧ ಗ್ರಾಮಗಳಿಂದ ಆಗಮಿಸಿದ ಭಜನಾ‌ ಮಂಡಳಿಗಳಿಂದ ಜಾಗರಣೆ ಜರುಗುವುದು. 30ರಂದು ಬೆಳಿಗ್ಗೆ ಶಿವಯ್ಯ ನಿಂಗಯ್ಯ ಹಿರೇಮಠ ನೇತೃತ್ವದಲ್ಲಿ ಸ್ವಾಮೀಜಿ ಗದ್ದುಗೆಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಲ ನಡೆಯುವುದು.

ರಾತ್ರಿ 8.30ಕ್ಕೆ ಬ್ರಹ್ಮಾನಂದ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹೋತ್ಸವ ಜರುಗಲಿದೆ  ಎಂದು ಬ್ರಹ್ಮಾನಂದ ಆರಾಧನಾ ಮಹೋತ್ಸವದ ಸದ್ಭಕ್ತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.