ADVERTISEMENT

‘ತಳ್ಳಾಟ, ನೂಕಾಟ ಕಾಂಗ್ರೆಸ್ ಸಂಸ್ಕೃತಿ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 2:13 IST
Last Updated 16 ಡಿಸೆಂಬರ್ 2020, 2:13 IST

ಗದಗ: ‘ಸದನದಲ್ಲಿ ತಳ್ಳಾಟ, ನೂಕಾಟ ಕಾಂಗ್ರೆಸ್ ಸಂಸ್ಕೃತಿ. ಸಿದ್ದರಾಮಯ್ಯ ಈ ಹಿಂದೆಯೂ ಇದನ್ನು ಮಾಡಿದ್ದಾರೆ’ ಎಂದು ಸಚಿವ ಸಿ.ಸಿ.ಪಾಟೀಲ ಹರಿಹಾಯ್ದರು.

ಮಂಗಳವಾರ ಸದನದಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ಮಸೂದೆ ಹಿಂಪಡೆಯುುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರ ಅರ್ಥ ಆಕಳುಗಳನ್ನು ಕಟುಕರಿಗೆ ಕೊಡುವುದೇ’ ಎಂದು ಕುಟುಕಿದ ಅವರು, ರಾಜ್ಯದ ಹಿಂದೂಗಳ ಭಾವನೆ ಜೊತೆ ಅವರು ಆಟವಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಬಹುಮತ ಇದ್ದರೆ ಈ ರಾದ್ಧಾಂತ ಏಕೆ. ಅವಿಶ್ವಾಸ ಸೋತರೆ ಹಾಲಿಯವರೇ ಮುಂದುವರಿಯುತ್ತಾರೆ. ವ್ಯಕ್ತಿಗಿಂತ ಪೀಠ ಮುಖ್ಯ. ಪೀಠದ ಘನತೆ ಕಾಪಾಡಬೇಕು. ಇದು ಹಿಂದಿನಿಂದಲೂ ನಡೆದು ಬಂದಿರುವ ಸತ್ಸಂಪ್ರದಾಯ. ಅದನ್ನು ಪ್ರತಿಯೊಬ್ಬರೂ ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.