ADVERTISEMENT

ಬಾಲ್ಯ ವಿವಾಹ ದೇಶದ ಅಭಿವೃದ್ಧಿಗೆ ಮಾರಕ: ಕೆ.ಎಸ್. ಹೂಲಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:38 IST
Last Updated 23 ಜನವರಿ 2026, 8:38 IST
ನರಗುಂದದ ಮೌಲಾನಾ ಆಝಾದ್ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಜಾಗೃತಿ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು 
ನರಗುಂದದ ಮೌಲಾನಾ ಆಝಾದ್ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಜಾಗೃತಿ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು    

ನರಗುಂದ: ‘ಬಾಲ್ಯ ವಿವಾಹ ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ’ ಎಂದು ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ಹೂಲಿ ಹೇಳಿದರು.

ಪಟ್ಟಣದ ಮೌಲಾನಾ ಆಝಾದ್ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ಸಂರಕ್ಷಣಾ ಇಲಾಖೆ ಗುರುವಾರ ನಡೆದ ‘ಬಾಲ್ಯ ವಿವಾಹ ತಡೆ ಜಾಗೃತಿ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ’ ಉದ್ಘಾಟಿಸಿ ಮಾತಾನಾಡಿದರು.

ಬಾಲ್ಯ ವಿವಾಹ ತಡೆ ಹಾಗೂ ಮಕ್ಕಳಿಗೆ ರಕ್ಷಣೆ ನೀಡುವುದು ಕಾಯ್ದೆ ಉದ್ದೇಶವಾಗಿದೆ. ಬಾಲ್ಯ ವಿವಾಹ ನಡೆಯುವುದರ ಮಾಹಿತಿಯನ್ನು ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಸಿಡಿಪಿಒ ಕಚೇರಿ, ಅಂಗನವಾಡಿ ಕೆಂದ್ರಕ್ಕೆ ತಿಳಿಸಬೇಕು’ ಎಂದರು. 

ADVERTISEMENT

ಜಿಲ್ಲಾ ಮಕ್ಕಳ ಸಂರಕ್ಷಣಾ ಇಲಾಖೆ ನಿರ್ವಾಹಕ ಅಫ್ತಾಬ್ ಡಾಲಾಯತ್ ಮಾತನಾಡಿ, ‘ಬಾಲ್ಯ ವಿವಾಹ ತಡೆಗೆ ಸರ್ಕಾರ ಸಾಕಷ್ಟು ಕಾನೂನು ಜಾರಿ ಮಾಡಿದೆ. ಈ ಕುರಿತು 1098 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು’ ಎಂದರು.

ವಕೀಲ ವಿಠ್ಠಲ ಗಾಯಕವಾಡ, ಆತ್ಮಾನಂದ ನಾಯ್ಕರ, ಎಫ್.ಐ. ಖಾಜಿ, ಮುಖ್ಯ ಶಿಕ್ಷಕ ಅಶೋಕ ಲಮಾಣಿ, ಮಹೇಶ ಧೋತ್ರದ, ಅಬ್ದುಲ್ ಹವಾಲ್ದಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.