ಮಧು ಬಂಗಾರಪ್ಪ
ಗದಗ: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಾಯಿ ಮುಚ್ಚಿಕೊಂಡಿರಲು ಹೇಳಿದ್ದು, ಅದು ಹೊರತುಪಡಿಸಿದರೆ ಬೇರೇನು ಗೊತ್ತಿಲ್ಲ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
‘ಮುಖ್ಯಮಂತ್ರಿ ಬದಲಾಗುವರೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಾನು ಸದ್ಯಕ್ಕೆ ಏನನ್ನೂ ಹೇಳಲಾಗದು’ ಎಂದರು.
‘ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ವೇದಿಕೆ ಸಿದ್ಧವಾಗಿದೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸಿದ ಅವರು, ‘ಮನಸ್ಸೋಇಚ್ಛೆ ವಿಶ್ಲೇಷಣೆ ಮಾಡಿದರೆ, ನಾನೇನು ಹೇಳಲು ಸಾಧ್ಯ. ಇನ್ನೂ ಮೂರು ವರ್ಷ ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಅದಕ್ಕೆ ಹೀಗೆ ಹೇಳುತ್ತಾರೆ’ ಎಂದರು.
‘ಗ್ಯಾರಂಟಿ ಯೋಜನೆ ಘೋಷಿಸಿದಾಗ, ಕಾಂಗ್ರೆಸ್‌ನವರು ಸುಳ್ಳು ಹೇಳುವರು. ಅವುಗಳ ಅನುಷ್ಠಾನ ಅಸಾಧ್ಯ ಎಂದು ಪ್ರಶ್ನಿಸಿದವರು ಈಗ ನಾವು ಗ್ಯಾರಂಟಿ ವಿರೋಧಿಗಳಲ್ಲ ಎನ್ನುತ್ತಿದ್ದಾರೆ’ ಎಂದರು.
‘ಗ್ಯಾರಂಟಿ ಯೋಜನೆಗಳಿಗೆ ನಮ್ಮ ಶಾಸಕರ ವಿರೋಧವಿಲ್ಲ. ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಜನರು ಕೆಲವಷ್ಟು ಬೇಡಿಕೆಗಳನ್ನು ಇಟ್ಟಿರುತ್ತಾರೆ. ಅದನ್ನು ಕೊಡಬೇಕೆಂದರೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಅಂತ ಇವರು ಹೇಳಿರುತ್ತಾರೆ. ಮಾಧ್ಯಮದವರು ಅದಕ್ಕೆ ಹಿಂದಿನದ್ದು ಹಾಗೂ ಅದರ ಮುಂದಿನ ವಿಡಿಯೊ ಕಟ್ ಮಾಡಿ ಇದನ್ನು ಮಾತ್ರ ತೋರಿಸಿದ್ದಾರೆ’ ಎಂದರು.
‘ಆರ್‌ಎಸ್‌ಎಸ್ ನಿಷೇಧಿಸಬೇಕು’ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ದೇಶದಲ್ಲಿ ಯಾರೇ ಸಂವಿಧಾನದ ವಿರುದ್ಧ ಹೋದರೂ ಅವರನ್ನು ನಿಷೇಧಿಸುವುದು ಒಳ್ಳೆಯದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.