ಲಕ್ಷ್ಮೇಶ್ವರ: ತಾಲ್ಲೂಕಿನ ಬಟ್ಟೂರು ಗ್ರಾಮದಲ್ಲಿ ಅನಾಥ ಮಹಿಳೆ ಮೃತಪಟ್ಟಿದ್ದು, ಅಂತ್ಯ ಸಂಸ್ಕಾರವನ್ನು ಗ್ರಾಮದ ಬಸವೇಶ್ವರ ಯುವಕ ಮಂಡಳದ ಸದಸ್ಯರು ಹಾಗೂ ಗ್ರಾಮಸ್ಥರು ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಬುಧವಾರ ಜರುಗಿದೆ.
ಬಟ್ಟೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಕೆಲ ವರ್ಷಗಳಿಂದ ವಾಸವಾಗಿದ್ದ ಈರಮ್ಮ ಎಂಬ ಅನಾಥ ವೃದ್ಧೆ ಬುಧವಾರ ನಿಧನರಾದರು. ಮೃತ ಮಹಿಳೆಯ ಶವ ಸಂಸ್ಕಾರ ಹಿಂದೂ ಧರ್ಮದ ಪ್ರಕಾರ ನೆರವೇರಿಸಲಾಯಿತು. ಯುವಕ ಮಂಡಳದ ಸದಸ್ಯರು ಹಾಗೂ ಗ್ರಾಮದ ಜನರು ಭಾಗವಹಿಸಿದ್ದರು. ಯುವಕ ಮಂಡಳದ ಸದಸ್ಯರು ಅನಾಥ ಮಹಿಳೆಯ ಶವ ಸಂಸ್ಕಾರ ನಡೆಸಿದದ್ದು ಇತರರಿಗೆ ಮಾದರಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.