ಗಜೇಂದ್ರಗಡ: ‘79ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆಯುವುದರ ಜತೆಗೆ ಅವರ ಬದುಕು, ಹೋರಾಟದ ಕುರಿತು ಯುವ ಜನತೆಗೆ ತಿಳಿಸಬೇಕಿದೆ’ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ರೋಣ ರಸ್ತೆಯಲ್ಲಿ ಗುರುವಾರ ಬಿಜೆಪಿ ರೋಣ ಮಂಡಲ ವತಿಯಿಂದ ಹರ್ ಘರ್ ತಿರಂಗ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
‘ಬ್ರಿಟಿಷರ ವಶದಲ್ಲಿದ್ದ ಭಾರತ ದೇಶವನ್ನು ಸ್ವತಂತ್ರಗೊಳಿಸಲು ಹಲವಾರು ವರ್ಷಗಳ ಕಾಲ ಲಕ್ಷಾಂತರ ಜನರು ಹೋರಾಟ ನಡೆಸಿ ಹುತಾತ್ಮರಾಗಿದ್ದು, ನಾವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಗೌರವ ಸಲ್ಲಿಸಬೇಕು’ ಎಂದರು.
ಬೈಕ್ ರ್‍ಯಾಲಿಯು ಪಟ್ಟಣದ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಹಿರೇಬಜಾರ, ಕಟ್ಟಿಬಸವೇಶ್ವರ ರಂಗ ಮಂದಿರ, ಕೊಳ್ಳಿಯವರ ಕತ್ರಿ, ಭಜರಂಗ ವೃತ್ತ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತದ ಮೂಲಕ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಗೃಹ ಕಚೇರಿ ತಲುಪಿತು.
ಈ ವೇಳೆ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ, ಪ್ರಧಾನ ಕಾರ್ಯದರ್ಶಿಗಳಾದ ರಮೇಶ ವಕ್ಕರ, ಬಾಲಾಜಿರಾವ್ ಭೋಸ್ಲೆ, ರಾಜೇಂದ್ರ ಘೋರ್ಪಡೆ, ಮುಖಂಡರಾದ ಅಶೋಕ ನವಲಗುಂದ, ಅಶೋಕ ವನ್ನಾಲ, ಬುಡ್ಡಪ್ಪ ಮೂಲಿಮನಿ, ವೀರಪ್ಪ ಪಟ್ಟಣಶೆಟ್ಟಿ, ಹುಲ್ಲಪ್ಪ ಕೆಂಗಾರ, ಶಂಕರ ಇಟಗಿ, ರಂಗನಾಥ ಮೇಟಿ, ಮಾಹಾಂತೇಶ ಪೂಜಾರ, ಸುಗೂರೇಶ ಕಾಜಗಾರ, ಬದ್ರಿನಾಥ ಜೋಶಿ, ಯು.ಆರ್. ಚನ್ನಮ್ಮನವರ, ಅಂದಪ್ಪ ಅಂಗಡಿ, ಡಿ.ಜಿ. ಕಟ್ಟಿಮನಿ, ಶಿವಕುಮಾರ ಜಾಧವ, ಮುದಿಯಪ್ಪ ಮುಧೋಳ, ಭೀಮಪ್ಪ ಮಾದರ, ಸಲೀಂ ಕಲಾದಗಿ, ಶಿವು ಅರಳಿ, ಶಂಕರ ಇಂಜನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.