ADVERTISEMENT

‘ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ’

ಗದಗ ಜಿಲ್ಲಾ ಕ್ಲಾಥ್ ಮರ್ಚೆಂಟ್ಸ್‌ ಅಸೋಸಿಯೇಶನ್‍ನ ವಾರ್ಷಿಕ ಸಭೆ: ಹಿರಿಯರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 4:55 IST
Last Updated 30 ಡಿಸೆಂಬರ್ 2025, 4:55 IST
ಗದಗ ಜಿಲ್ಲಾ ಕ್ಲಾಥ್ ಮರ್ಚೆಂಟ್ಸ್‌ ಅಸೋಸಿಯೇಷನ್‍ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಲೆಕ್ಕಪರಿಶೋಧಕ ನರೇಶ್ ಶಹಾ ಮಾತನಾಡಿದರು.
ಗದಗ ಜಿಲ್ಲಾ ಕ್ಲಾಥ್ ಮರ್ಚೆಂಟ್ಸ್‌ ಅಸೋಸಿಯೇಷನ್‍ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಲೆಕ್ಕಪರಿಶೋಧಕ ನರೇಶ್ ಶಹಾ ಮಾತನಾಡಿದರು.   

ಗದಗ: ವ್ಯಾಪಾರ ವಹಿವಾಟಿನ ಲೆಕ್ಕಪತ್ರದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದಲ್ಲಿ ಯಶಸ್ವಿ ವ್ಯಾಪಾರಸ್ಥನಾಗಲು ಸಾಧ್ಯ ಎಂದು ಲೆಕ್ಕಪರಿಶೋಧಕ ನರೇಶ್ ಶಹಾ ಹೇಳಿದರು.

ನಗರದ ಕ್ಲಾಥ್ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆದ ಗದಗ ಜಿಲ್ಲಾ ಕ್ಲಾಥ್ ಮರ್ಚೆಂಟ್ಸ್‌ ಅಸೋಸಿಯೇಷನ್‍ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

‘ನಿತ್ಯದ ವ್ಯವಹಾರದ ಜಮಾ ಖರ್ಚು ಸರಿಯಾಗಿದ್ದರೆ ವ್ಯವಹಾರದಲ್ಲಿ ಸ್ಪಷ್ಠತೆ ಬರುವುದು. ಈ ವಿಷಯವಾಗಿ ಕಾಳಜಿ ಅವಶ್ಯಕ. ತೆರಿಗೆ ವಿಷಯಗಳ ಬಗ್ಗೆ ವ್ಯಾಪಾರಸ್ಥರಿಗೆ ಮಾಹಿತಿ ಇರಬೇಕು. ಲೆಕ್ಕಪರಿಶೋಧಕರ ಮಾರ್ಗದರ್ಶನ ಪಡೆದು ಅವರ ಸಲಹೆ ಅನುಸರಿಸಬೇಕು’ ಎಂದು ಹೇಳಿದರು. 

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ ಬನ್ಸಾಲಿ ಮಾತನಾಡಿ, ‘ಸಂಘಟನೆಯ ಏಕತೆ, ವ್ಯಾಪಾರಿಗಳ ಹಿತಾಸಕ್ತಿಗಾಗಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಸೋಹನ್‍ರಾಜ್ ಶಹಾ ಹಾಗೂ ಹರೀಶ್ ಜಮತಾನಿ ಅವರನ್ನು ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಹೀರಾಚಂದ್ ಸೇಮಲಾನಿ, ಖಜಾಂಚಿ ಮಹಾವೀರ ಸೊಲಂಕಿ, ಸಲಹೆಗಾರ ಹರೀಶ್ ಶಹಾ ಹಾಗೂ ಸದಸ್ಯರಾದ ಪೃಥ್ವಿರಾಜ್ ಬನ್ಸಾಲಿ, ಪ್ರವೀಣ ಸಂಕಲೇಚಾ, ಸ್ವರೂಪ್, ರಾಜೇಂದ್ರ ಸಿಂಘ್ವಿ, ಮಹಾವೀರ ಸಂಕಲೇಚಾ, ರಾಜೇಂದ್ರ ಪಾರ್ಲೇಚಾ ಇದ್ದರು. ಕಿಶನ್ ಬಾಗಮಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.