
ಗದಗ: ನಗರದ ಕೆಎಲ್ಇ ಸೊಸೈಟಿಯ ಜೆ.ಟಿ. ಕಾಲೇಜಿನ ಬಿಬಿಎ ವಿಭಾಗದ ವತಿಯಿಂದ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳಿಗಾಗಿ ‘ಉತ್ಪಾದಕ ಕೃತಕ ಬುದ್ಧಿಮತ್ತೆ ಮತ್ತು ನೈಸರ್ಗಿಕ ಭಾಷಾ ಒಳಹರಿವು’ ವಿಷಯದ ಕುರಿತು ಪ್ರಮಾಣಪತ್ರ ಕೋರ್ಸ್ ಅನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡೇಟಾ ಅನಾಲಿಸ್ಟ್ ಹಾಗೂ ಅನಾಲಿಟಿಕ್ಸ್ ತರಬೇತುದಾರ ಅಸ್ವಿನ್ ವಿಶ್ವನಾಥ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉತ್ಪಾದಕ ಕೃತಕ ಬುದ್ಧಿಮತ್ತೆಯ ಮೂಲಭೂತ ತತ್ವಗಳು, ಅದರ ಪ್ರಾಯೋಗಿಕ ಬಳಕೆಗಳು ಹಾಗೂ ನೈಸರ್ಗಿಕ ಭಾಷಾ ಒಳಹರಿವು, ನೈಸರ್ಗಿಕ ಭಾಷಾ ಒಳಹರಿವಿನ ಮಹತ್ವವನ್ನು ವಿವರಿಸಿದರು.
ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಅದರ ಬಳಕೆ ಕುರಿತು ಅವರು ತಿಳಿಸಿಕೊಟ್ಟರು.
ಕಾರ್ಯಕ್ರಮವು ಫ್ಯಾಕಲ್ಟಿ ಇಬ್‌ಚಾರ್ಜ್ ಪ್ರೊ. ಬಿಂದುಶ್ರೀ ಎಚ್. ಮತ್ತು ಪ್ರೊ. ಮೀನಾಕ್ಷಿ ಅಬ್ಬಿಗೇರಿ ಅವರ ಮಾರ್ಗದರ್ಶನದಲ್ಲಿ ಹಾಗೂ ಸಂಯೋಜಕರಾದ ಪ್ರೊ. ಜಿ. ಚನ್ನಾರಾವ್ ನೇತೃತ್ವದಲ್ಲಿ ನಡೆಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಈ ಪ್ರಮಾಣಪತ್ರ ಕೋರ್ಸ್ ವಿದ್ಯಾರ್ಥಿಗಳಿಗೆ ನವೀನ ತಾಂತ್ರಿಕ ಕೌಶಲಗಳನ್ನು ಬೆಳೆಸಲು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳಿಗೆ ಸಜ್ಜುಗೊಳಿಸಲು ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.