
ಸಾಂದರ್ಭಿಕ ಚಿತ್ರ
ಗದಗ: ‘ಜಿಲ್ಲೆಯ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಉದ್ದೇಶದಿಂದ ನಗರದ ಆದರ್ಶ ಶಿಕ್ಷಣ ಸಮಿತಿ ವತಿಯಿಂದ ಡಿ.25ರಿಂದ 28ರ ವರೆಗೆ ಗದಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ’ ಎಂದು ಟೂರ್ನಿ ಸಂಯೋಜಕ ಕಿರಣ್ ಆಸಂಗಿ ತಿಳಿಸಿದರು.
‘ವೈಟ್ ಲೆದರ್‌ಬಾಲ್ ಕ್ರಿಕೆಟ್ ಟೂರ್ನಿ ಟಿ 20 ಮಾದರಿಯಲ್ಲಿ ನಡೆಯಲಿದ್ದು, ಗದಗ ಕ್ರಷರ್ಸ್, ಗದಗ ಟೈಟನ್ಸ್, ಗದಗ ಸ್ಟ್ರೈಕರ್ಸ್ ಹಾಗೂ ಗದಗ ವಲ್ಚರ್ಸ್ ಎಂಬ ನಾಲ್ಕು ಫ್ರಾಂಚೈಸಿಗಳು ಭಾಗವಹಿಸಲಿವೆ’ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಒಂದೊಂದು ಫ್ರಾಂಚೈಸಿಯಲ್ಲಿ ತಲಾ 17 ಮಂದಿ ಆಟಗಾರರು ಇರುತ್ತಾರೆ. ಪಂದ್ಯಗಳು ಲೀಗ್ ಕಂ ನಾಕೌಟ್ ಮಾದರಿ ಇರಲಿದ್ದು, ಪ್ರತಿ ತಂಡಕ್ಕೂ ಮೂರು ನಾಕೌಟ್ ಪಂದ್ಯಗಳು ಇರಲಿವೆ’ ಎಂದು ಹೇಳಿದರು.
‘ಪ್ರತಿ ತಂಡದಲ್ಲಿ 16 ವರ್ಷದೊಳಗಿನ ಒಬ್ಬ ಯುವ ಆಟಗಾರನಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಪೈಕಿ ಗದಗ ವಲ್ಚರ್ಸ್ ತಂಡವು 12 ವರ್ಷದ ಬಾಲಕಿ ಭೂಮಿಕಾ ಸವದಿ ಹಾಗೂ 19 ವರ್ಷದ ಯುವತಿ ಮನುಶ್ರೀ ಕುರ್ತಕೋಟಿ ಮಹಿಳಾ ಕ್ರಿಕೆಟಿಗರನ್ನೂ ಹೊಂದಿದೆ. ವಿಜೇತ ತಂಡಕ್ಕೆ ₹50 ಸಾವಿರ ನಗದು ಜತೆಗೆ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹20 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ಹೇಳಿದರು.
ಸಮೀರ್ ಗುಳೇದಗುಡ್ಡ, ಕಾರ್ತಿಕ ಬಾಗಲಕೋಟ, ಅಸ್ಲಂ ಮುಧೋಳ, ವಿನಯ ಬಾರಕೇರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.