ಗದಗ: ಜಿಲ್ಲೆಯಲ್ಲಿ ಎರಡೂವರೆ ವರ್ಷಗಳ ಕಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಜನಮೆಚ್ಚುಗೆಗೆ ಪಾತ್ರವಾಗಿದ್ದ ಬಿ.ಎಸ್.ನೇಮಗೌಡ ಅವರಿಗೆ ಗದಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಮಾಧ್ಯಮಿಕ ಶಾಲಾ ನೌಕರರ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಲಮಾಣಿ ಮಾತನಾಡಿ, ‘ಬಿ.ಎಸ್.ನೇಮಗೌಡ ಅವರು ಗದಗ ಜಿಲ್ಲೆಯಲ್ಲಿ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರ ಅವಧಿಯಲ್ಲಿ ಗದಗ ಮಾದರಿ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಯಿತು’ ಎಂದು ಹೇಳಿದರು.
‘ಗದಗ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಮಾಡಿದ್ದು ಇವರ ದೊಡ್ಡ ಸಾಧನೆಯಾಗಿದೆ. ಜತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿದರು’ ಎಂದರು.
ಪ್ರಸ್ತುತ ಬೆಂಗಳೂರು ನಗರದ ಉತ್ತರ ವಲಯದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ಲಭಿಸಲಿ ಎಂದು ಆಶಿಸಿದರು.
ಗದಗ ಜಿಲ್ಲಾ ನೂತನ ಎಸ್‌ಪಿ ರೋಹನ್ ಜಗದೀಶ್ ಅವರನ್ನು ಸ್ವಾಗತಿಸಲಾಯಿತು. ಡಿಸಿಪಿ ಬಿ.ಎಸ್.ನೇಮಗೌಡ ದಂಪತಿಯನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಬೂದಪ್ಪ ಅಂಗಡಿ, ಗದಗ ನಗರ ಘಟಕದ ಅಧ್ಯಕ್ಷ ಬಿ.ಕೆ.ನಿಂಬನ ಗೌಡ್ರು, ಕಾರ್ಯದರ್ಶಿ ಗಿರೀಶ್ ನರಗುಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.