
ಗದಗ: ‘ಭೂಗೋಳಶಾಸ್ತ್ರದ ಮೂಲಭೂತ ಜ್ಞಾನವು ಆಧುನಿಕ ಜಿಯೋಸ್ಪೇಷಿಯಲ್ ಹಾಗೂ ಜಿಯೋಇನ್ಫ್‌ರ್ಮಾಟಿಕ್ಸ್ ತಂತ್ರಜ್ಞಾನಗಳನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಅವಶ್ಯಕವಾಗಿದೆ’ ಎಂದು ಪ್ರಭಾರ ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡರ ಹೇಳಿದರು.
ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಭೂಗೋಳಶಾಸ್ತ್ರ ಮತ್ತು ಜಿಯೋಇನ್ಫರ್ಮಾಟಿಕ್ಸ್‌ನ ಮೂಲಭೂತ ತತ್ತ್ವಗಳು ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ಮತ್ತು ಜಿಯೋಇನ್ಫರ್ಮಾಟಿಕ್ಸ್ ವಿಭಾಗದ ಪ್ರಾಧ್ಯಾಪಕ ಅಶೋಕ್ ಡಿ. ಹಂಜಗಿ ಭೂಗೋಳಶಾಸ್ತ್ರದ ತತ್ತ್ವಾಧಾರಿತ ಅಂಶಗಳು ಮತ್ತು ಅವುಗಳ ಜಿಯೋಇನ್ಫರ್ಮಾಟಿಕ್ಸ್‌ನೊಂದಿಗೆ ಇರುವ ಸಂಯೋಜನೆಯನ್ನು ವಿವರಿಸಿದರು.
ಎಂಎಸ್‌ಸಿ ಜಿಯೋಇನ್ಫರ್ಮಾಟಿಕ್ಸ್ ಕಾರ್ಯಕ್ರಮದ ಸಂಯೋಜಕ ಸುರೇಶ್ ಲಮಾಣಿ ಸ್ವಾಗತಿಸಿದರು. ಬಿಎಸ್‌ಸಿ ಜಿಐಎಸ್ ಮತ್ತು ಕಂಪ್ಯೂಟರ್ ಸೈನ್ಸ್ ಕಾರ್ಯಕ್ರಮದ ಸಂಯೋಜಕ ಯೋಗೇಶ್ ಕರಿಕಟ್ಟಿ ವಂದಿಸಿದರು. ಶ್ರೇಯಾಂಕಾ ವಿ. ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಬಿಎಸ್‌ಸಿ ಮತ್ತು ಎಂಎಸ್‌ಸಿ ಜಿಯೋಇನ್ಫರ್ಮಾಟಿಕ್ಸ್ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.