ADVERTISEMENT

ಗದಗ: ಕತ್ತು ಕೊಯ್ದು ಯುವಕನ ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿದ ಹಂತಕರು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:33 IST
Last Updated 28 ಫೆಬ್ರುವರಿ 2026, 7:33 IST
<div class="paragraphs"><p>ಒಳ ಚಿತ್ರದಲ್ಲಿ ಮಹಮ್ಮದ್‌ ಫಾರೂಕ್ ಶೇಖ್</p></div>

ಒಳ ಚಿತ್ರದಲ್ಲಿ ಮಹಮ್ಮದ್‌ ಫಾರೂಕ್ ಶೇಖ್

   

ಲಕ್ಷ್ಮೇಶ್ವರ (ಗದಗ ಜಿಲ್ಲೆ): ತಾಲ್ಲೂಕಿನ ಶಿಗ್ಲಿ ಗ್ರಾಮದ ಯುವಕನ ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮಹಮ್ಮದ್‌ ಫಾರೂಕ್ ಶೇಖ್ ಸನದಿ (25) ಕೊಲೆಯಾದ ಯುವಕ.

ADVERTISEMENT

ಈತ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹರ್ಲಾಪುರ ಗ್ರಾಮದವರಾಗಿದ್ದು, ಸದ್ಯ ಶಿಗ್ಲಿ ಗ್ರಾಮದಲ್ಲಿ ವಾಸವಿದ್ದರು.

ಹಂತಕರು ಯುವಕನನ್ನು ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿ ಹೋಗಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.