ರೋಣ (ಗದಗ ಜಿಲ್ಲೆ): ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಆರು ಜನರು ಗಾಯಗೊಂಡ ಘಟನೆ ತಾಲ್ಲೂಕಿನ ಹೊನ್ನಿಗನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಅಂದಾನಗೌಡ ಪವಾಡಿಗೌಡ್ರ, ಸುನಂದಾ ಪವಾಡಿಗೌಡ್ರ, ಕಸ್ತೂರೆವ್ವ ಪವಾಡಿಗೌಡ್ರ, ಶರಣವ್ವ ಮಾದರ, ರೂಪ ಪಾಟೀಲ, ಸುಜಾತಾ ಪಾಟೀಲ ಸಿಡಿಲು ಬಡಿದು ಗಾಯಗೊಂಡವರು. ಎಲ್ಲರನ್ನೂ ರೋಣ ಪಟ್ಟಣದ ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.