ADVERTISEMENT

ಶಾರ್ಟ್‌ ಸರ್ಕಿಟ್:‌ ತೋಟದ ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:58 IST
Last Updated 22 ಫೆಬ್ರುವರಿ 2026, 0:58 IST
ಗಜೇಂದ್ರಗಡದ ಖುದಾನಸಾಬ ಗೋಡೆಕಾರ ಎಂಬುವವರ ತೋಟದ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಮನೆಯಲ್ಲಿದ್ದ ಸಾಮಾನುಗಳು ಬೆಂಕಿ ಆಹುತಿಯಾಗಿದೆ
ಗಜೇಂದ್ರಗಡದ ಖುದಾನಸಾಬ ಗೋಡೆಕಾರ ಎಂಬುವವರ ತೋಟದ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಮನೆಯಲ್ಲಿದ್ದ ಸಾಮಾನುಗಳು ಬೆಂಕಿ ಆಹುತಿಯಾಗಿದೆ   

ಗಜೇಂದ್ರಗಡ: ಪಟ್ಟಣದ 23ನೇ ವಾರ್ಡ್‌ನ ಉಣಚಗೇರಿ ಗ್ರಾಮದ ಜಮೀನಿನಲ್ಲಿದ್ದ ತೋಟದ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದಾಗಿ ಕೃಷಿ ಉಪಕರಣಗಳು ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ.

ಪಟ್ಟಣದ ಖುದಾನಸಾಬ ಗೋಡೆಕಾರ ಎಂಬುವವರಿಗೆ ಸೇರಿದ ಜಮೀನು ಉಣಚಗೇರಿ ಗ್ರಾಮದ ಸರಹದ್ದಿನಲ್ಲಿದ್ದು, ತೋಟದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಶನಿವಾರ ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ಕಟ್ಟಿಗೆ, ಚಕ್ಕಡಿಯ ಬಿಡಿ ಭಾಗಗಳು, ಕಟ್ಟಿಗೆ ಕಪಾಟು, ತಾಡಪತ್ರಿಗಳು, ಸ್ಪ್ರೇಯರ್‌, ರಸಗೊಬ್ಬರ ಸೇರಿದಂತೆ ಕೃಷಿ ಉಪಕರಣಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಕಿಗೆ ಸುಮಾರು ₹1.5 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಿದ್ದಾರೆ.

ಗಜೇಂದ್ರಗಡದ ಖುದಾನಸಾಬ ಗೋಡೆಕಾರ ಎಂಬುವವರ ತೋಟದ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಮನೆಯಲ್ಲಿದ್ದ ಸಾಮಾನುಗಳೂ ಬೆಂಕಿ ಆಹುತಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT