ರೋಣ: ದೇಶದಾದ್ಯಂತ ಗುರುವಾರ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಸಂದರ್ಭದಲ್ಲಿ ತಹಶೀಲ್ದಾರ್ ಕಾರ್ಯಾಲಯದಲ್ಲಿನ ಗಾಂಧಿ ಪ್ರತಿಮೆ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಾರಣ, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಯಿತು.
ವಿಜಯದಶಮಿ ರಜಾ ದಿನದ ಮಧ್ಯೆ ಗಾಂಧಿ ಜಯಂತಿ ಬಂದಿದ್ದು, ಅಧಿಕಾರಿಗಳು ರಜೆಯಲ್ಲಿರುವ ಕಾರಣ ತಹಶೀಲ್ದಾರ್ ಕಚೇರಿಯ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮೇಲಿನ ಒಣಗಿದ ಹೂವಿನ ಮಾಲೆ ತೆಗೆದು ಹಾಕದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಸಾರ್ಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ತಾಲ್ಲೂಕಿನ ಹೋರಾಟಗಾರರ ಸವಿನೆನಪಿಗಾಗಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆ ಕೆಳಭಾಗದ ಸುತ್ತಲೂ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಬರೆಯಿಸಲಾಗಿದೆ. ಇಂತಹ ಮಹತ್ವಪೂರ್ಣ ಈ ಸಂದರ್ಭದಲ್ಲಿಯೂ ಪ್ರತಿಮೆಯನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಆವರಣದ ಮುಂದಿರುವ ಗಾಂಧೀ ಪ್ರತಿಮೆಗೆ ಹಾರ ಹಾಕದಷ್ಟು ತಾಲ್ಲೂಕು ಆಡಳಿತ ನಿರ್ಲಕ್ಷ್ಯತನ ತೋರಿದೆ. ತಾಲ್ಲೂಕು ಆಡಳಿತವೇ ಈ ರೀತಿ ವರ್ತಿಸಿದರೆ ಸಾರ್ವಜನಿಕರಿಗೆ ಏನು ಸಂದೇಶ ಬರುತ್ತದೆ ಎಂಬ ಅರಿವು ಅಧಿಕಾರಿಗಳಲ್ಲಿ ಇರಬೇಕುಲೀಲಾವತಿ ಚಿತ್ರಗಾರ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ
ಗಾಂಧಿ ಜಯಂತಿಯ ದಿನ ಪ್ರತಿಮೆಯನ್ನು ನಿರ್ಲಕ್ಷಿಸಿರುವ ತಾಲ್ಲೂಕು ಆಡಳಿತದ ಅಧಿಕಾರಿಗಳ ವರ್ತನೆ ಖಂಡನೀಯ. ಕೂಡಲೇ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕುಅಶೋಕ ನವಲಗುಂದ ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.