
ಗಜೇಂದ್ರಗಡ: ‘ಗಾಂಧೀಜಿಯವರನ್ನು ಕೊಂದ ಶಕ್ತಿಗಳು ಇಂದು ಅಧಿಕಾರದ ಅಹಮ್ಮಿನಲ್ಲಿದ್ದು, ಆ ಶಕ್ತಿಯನ್ನು ಸತ್ಯ, ಅಹಿಂಸೆ, ಸೌಹಾರ್ದ ಸಂದೇಶಗಳ ಮೂಲಕ ತೊಲಗಿಸಬೇಕಿದೆʼ ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಹೇಳಿದರು.
ಪಟ್ಟಣದ ಸೇವಾಲಾಲ್ ಕಲ್ಯಾಣ ಮಂಟಪದಲ್ಲಿ ಸೌಹಾರ್ದ ಕರ್ನಾಟಕ ಗಜೇಂದ್ರಗಡ ಸಮಿತಿ ವತಿಯಿಂದ ಈಚೆಗೆ ನಡೆದ ಗಾಂಧಿಯವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖಂಡ ಬಾಲು ರಾಠೋಡ ಮಾತನಾಡಿ, ‘ದೇಶದ ಸ್ವಾತಂತ್ರ್ಯ ಚಳವಳಿಗೆ ದೊಡ್ಡ ಕೊಡುಗೆ ನೀಡಿದ ಗಾಂಧೀಜಿಯವರನ್ನು ದೇಶ ವಿಭಜನೆಯ ನೆಪದಲ್ಲಿ ಕೆಲವರು ಕೊಂದರು. ಆ ಮೂಲಕ ದೇಶದ ಸಂವಿಧಾನ, ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡಿದವು. ಆದರೆ ನಾವು ಈ ದೇಶದ ಸೌಹಾರ್ದದ ರಕ್ಷಣೆಗಾಗಿ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಂಡು ಸೌಹಾರ್ದ ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆʼ ಎಂದರು.
ಮುಖಂಡರಾದ ಎಸ್.ಎ.ಬಿಂಡವಾಡ, ಪೀರು ರಾಠೋಡ ಮಾತನಾಡಿದರು. ಎಸ್.ಎಫ್.ಐ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು ರಾಠೋಡ, ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ ರಾಠೋಡ, ಗುರು ವಿಶ್ವರ, ರೂಪೇಶ ಮಾಳೋತ್ತರ, ನೀಲಮ್ಮ ಹಿರೇಮಠ, ಶರಣಮ್ಮ ವಾಲಿ, ಅಕ್ಕಮ್ಮ ರಾಠೋಡ, ಮೈಬು ಹವಾಲ್ದಾರ, ರೇವಣಪ್ಪ ರಾಠೋಡ, ಅಂಬರೀಶ ಚೌವ್ಹಾಣ, ಕೆ.ಸಿ.ಗೋಡೆಕಾರ, ರಾಜು ಮಾಂಡ್ರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.