ADVERTISEMENT

ಉತ್ತಮ ಶಿಕ್ಷಕರು ಸಮಾಜದ ರಕ್ಷಕರು: ವಸಂತರಾವ್‌ ಗಾರಗಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 3:14 IST
Last Updated 9 ಸೆಪ್ಟೆಂಬರ್ 2025, 3:14 IST
ಗಜೇಂದ್ರಗಡದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉಪನ್ಯಾಸಕರು ಉದ್ಘಾಟಿಸಿದರು
ಗಜೇಂದ್ರಗಡದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉಪನ್ಯಾಸಕರು ಉದ್ಘಾಟಿಸಿದರು   

ಗಜೇಂದ್ರಗಡ: ‘ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಿಕ್ಷಕರೇ ಸಮಾಜದ ರಕ್ಷಕರು’ ಎಂದು ಪ್ರಾಚಾರ್ಯ ವಸಂತರಾವ್‌ ಗಾರಗಿ ಹೇಳಿದರು.

ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪದವಿ ಕಾಲೇಜಿನ ಪ್ರಾಚಾರ್ಯ ಬಸಯ್ಯ ಹಿರೇಮಠ ಮಾತನಾಡಿ, ‘ಕಾಲೇಜಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೇರುಮಟ್ಟದ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳ ಬದುಕಿಗೆ ಸ್ಫೂರ್ತಿ ಸಿಗುತ್ತದೆ’ ಎಂದರು.

ADVERTISEMENT

ಈ ವೇಳೆ ಉಪನ್ಯಾಸಕರಾದ ಗೋಪಾಲ ರಾಯಬಾಗಿ, ಸಂಗಮೇಶ ವಸ್ತ್ರದ, ಪ್ರತಿಭಾ ಲಕ್ಷಕೊಪ್ಪದ, ಸಂಗೀತಾ ನಾಲತವಾಡ, ವಿಜಯಲಕ್ಷ್ಮೀ ಅರಳಿಕಟ್ಟಿ, ಪ್ರೀತಿ ಹೊಂಬಳ, ಮಂಜುನಾಥ ಕುಂಬಾರ, ಬಾಲು ವಾಲ್ಮೀಕಿ, ಬಿ.ಎಚ್.‌ ಪೂಜಾರ, ಭಾಗ್ಯಶ್ರೀ ಮಾದರ, ಪ್ರಶಾಂತ ಗಾಳಿಪೂಜೆಮಠ, ಶಿವಾನಂದ ಹಳ್ಳದ, ಈರಣ್ಣ ಹಡಪದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.