ಗದಗ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶನಿವಾರ ಕ್ವಿಂಟಲ್ ಹೆಸರುಕಾಳು ₹ 15,001ಕ್ಕೆ ಮಾರಾಟವಾಗಿದ್ದು, ರೈತರಿಗೆ ಬಂಪರ್ ಬೆಲೆ ಸಿಕ್ಕಿದೆ.
ಗದಗ, ಕೊಪ್ಪಳ, ಧಾರವಾಡ ಸೇರಿ ವಿವಿಧ ಜಿಲ್ಲೆಗಳಿಂದ ಇಲ್ಲಿನ ಎಪಿಎಂಸಿಗೆ ಒಟ್ಟು 4,200 ಕ್ವಿಂಟಲ್ ಹೆಸರುಕಾಳು ಆವಕವಾಗಿತ್ತು.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ರೈತ ಅಮರೇಶ ಬಾವಿ ಹೊನ್ನಿಗನೂರ ಅವರಿಂದ ಇಲ್ಲಿನ ಅನ್ನದಾನೇಶ್ವರ ಬ್ರದರ್ಸ್ ಖರೀದಿದಾರರು ಎರಡು ಚೀಲ ಹೆಸರನ್ನು ಕ್ವಿಂಟಲ್‌ಗೆ ₹ 15,001ರಂತೆ ಖರೀದಿಸಿದ್ದಾರೆ. ಇದು ಇಲ್ಲಿನ ಎಪಿಎಂಸಿಯಲ್ಲಿ ಹೆಸರುಕಾಳಿಗೆ ಸಿಕ್ಕ ಗರಿಷ್ಠ ಬೆಲೆ.
ಮುಂಗಾರು ಕೈಕೊಟ್ಟ ಕಾರಣ ಹೆಸರು ಬಿತ್ತನೆ ಅವಧಿ ಮುಗಿಯುವ ಹಂತದಲ್ಲಿ ಜಿಲ್ಲೆಯ ಕೆಲ ರೈತರು ಧೈರ್ಯ ಮಾಡಿ ಬಿತ್ತನೆ ಮಾಡಿದ್ದರು. ಆದರೆ, ಮಳೆ ಕೊರತೆ ನಿರಂತರವಾಗಿ ಕಾಡಿದ ಕಾರಣ ಹೇಳಿಕೊಳ್ಳುವಂತಹ ಇಳುವರಿ ಬಂದಿರಲಿಲ್ಲ. ಈಗಿರುವ ಅಲ್ವಸ್ವಲ್ಪ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕುದುರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.