ADVERTISEMENT

ಆಡಂಬರದ ಜೀವನಕ್ಕಿಂತ ಜನ ಸೇವೆ ಮುಖ್ಯ: ಶಾಸಕ ಜಿ.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:57 IST
Last Updated 21 ಜುಲೈ 2025, 4:57 IST
ರೋಣ ಪಟ್ಟಣದ ಅಂಜುಮನ್ ಪ್ರೌಢಶಾಲೆ ಆವರಣದಲ್ಲಿ ಬಾವಾಸಾಬ್ ಬೆಟಗೇರಿ ಜನ್ಮದಿನದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿದರು
ರೋಣ ಪಟ್ಟಣದ ಅಂಜುಮನ್ ಪ್ರೌಢಶಾಲೆ ಆವರಣದಲ್ಲಿ ಬಾವಾಸಾಬ್ ಬೆಟಗೇರಿ ಜನ್ಮದಿನದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿದರು   

ರೋಣ: ‘ಆಡಂಬರದ ಆಚರಣೆಗಳಿಗೆ ಮಹತ್ವ ನೀಡದೆ ಸಂತೋಷದ ಕ್ಷಣಗಳನ್ನು ಬಡಜನರ ಮತ್ತು ಸಮಾಜದ ಸೇವೆಗಾಗಿ ಮೀಸಲಿಡುವ ಮೂಲಕ ಜನೋಪಯೋಗಿ ಕೆಲಸದಲ್ಲಿ ತೊಡಗಿಕೊಳ್ಳಬೇಕು’ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಅಂಜುಮನ್ ಪ್ರೌಢಶಾಲೆ ಆವರಣದಲ್ಲಿ ರೋಣ ಪುರಸಭೆ ಸದಸ್ಯ ಬಾವಾಸಾಬ್ ಬೆಟಗೇರಿ ಅವರ 56ನೇ ಜನ್ಮದಿನ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಮಾತನಾಡಿದರು.

‘ದೇಶದ ಬಡಜನತೆಯ ಆರೋಗ್ಯ ರಕ್ಷಣೆ ಸವಾಲಿನ ಕೆಲಸವಾಗಿದೆ. ಜನಪ್ರತಿನಿಧಿಗಳು ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಸಂಬಂಧಿಸಿದ ಸೇವೆಗಳನ್ನು ಬಡ ಜನತೆಗೆ ನೀಡುವ ಮೂಲಕ ನೆರವಾಗಬಹುದು. ಅಭಿಮಾನಿ ಬಳಗ ಹಮ್ಮಿಕೊಂಡ ಕಾರ್ಯಕ್ರಮ ಶ್ಘಾಘನೀಯ’ ಎಂದರು.

ADVERTISEMENT

ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಹೊರಪೇಟಿ ದರ್ಗಾದ ಸುಲೇಮಾನ್ ಶಾವಲಿ ಸಾನ್ನಿಧ್ಯ ವಹಿಸಿದ್ದರು. ಬಸವರಾಜ ನವಲಗುಂದ, ಎಚ್.ಎಸ್. ಸೋಂಪೂರ, ವಿ.ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಪುರಸಭೆ ಅಧ್ಯಕ್ಷ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನುಮಂತ ತಳ್ಳಿಕೇರಿ, ಗದಿಗೆಪ್ಪ ಕಿರೇಸೂರ, ನಿಂಬಣ್ಣ ಗಾಣಿಗೇರ, ಎಂ.ಎಸ್.ಖತೀಬ್, ದುರ್ಗಪ್ಪ ಹಿರೇಮನಿ, ರಂಗಮ್ಮ ಭಜಂತ್ರಿ, ಶಕುಂತಲಾ ಚಿತ್ರಗಾರ, ಕುಮಾರ ಚಿತ್ರಗಾರ, ಇನಾಯತ್ ತರಫದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.