ADVERTISEMENT

ಗಜೇಂದ್ರಗಡ: ಬಿರುಗಾಳಿ, ಮಳೆ: ಧರೆಗುರುಳಿದ ಮರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 16:01 IST
Last Updated 18 ಏಪ್ರಿಲ್ 2024, 16:01 IST
ಗಜೇಂದ್ರಗಡ ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಶೆಡ್‌ ಮೇಲೆ ಮರ ಬಿದ್ದಿದೆ
ಗಜೇಂದ್ರಗಡ ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಶೆಡ್‌ ಮೇಲೆ ಮರ ಬಿದ್ದಿದೆ   

ಗಜೇಂದ್ರಗಡ: ಪಟ್ಟಣ ಹೊರತುಪಡಿಸಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಅರ್ಧ ಗಂಟೆಗೂ ಅಧಿಕ ಉತ್ತಮ ಮಳೆಯಾಗಿದೆ.

ಮಧ್ಯಾಹ್ನ 2 ಗಂಟೆಗೆ ಆರಂಭವಾದ ಬಿರುಗಾಳಿ ಸಹಿತ ಮಳೆ ರಾಜೂರ, ದಿಂಡೂರ, ಲಕ್ಕಲಕಟ್ಟಿ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳಲ್ಲಿ ರಭಸವಾಗಿ ಸುರಿಯಿತು. ಗಜೇಂದ್ರಗಡ ಪಟ್ಟಣದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರೂ, ಮಳೆ ಸುಳಿಯಲಿಲ್ಲ.

ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ಬಿರುಗಾಳಿಗೆ ಗಿಡಗಳು ಧರೆಗುರುಳಿದ್ದು, ಹಲವು ಶೆಡ್‌ಗಳಿಗೆ ಹಾನಿಯಾಗಿದೆ. ಗ್ರಾಮದ ನಿಂಗಪ್ಪ ರಾಮಪ್ಪ ಬೆನಕನವಾರಿ ಅವರ ಜಮೀನಲ್ಲಿ ಮಳೆ-ಗಾಳಿಗೆ ಗಿಡಗಳು ಧರೆಗುರುಳಿದ್ದು, ಜಮೀನಿನಲ್ಲಿದ್ದ ಶೆಡ್‌ಗೆ ಹಾನಿಯಾಗಿದೆ.

ADVERTISEMENT
ಗಜೇಂದ್ರಗಡ ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಮರ ಧರೆಗೆ ಉರುಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.