ADVERTISEMENT

ಹಿಂದೂ ಸಮ್ಮೇಳನ: ಕರಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:22 IST
Last Updated 16 ಜನವರಿ 2026, 4:22 IST
ನರೇಗಲ್ ಪಟ್ಟಣದಲ್ಲಿ ಜ.24ರಂದು ನಡೆಯುವ ಹೋಬಳಿ ಮಟ್ಟದ ಹಿಂದೂ ಸಮ್ಮೇಳನದ ಭಿತ್ತಿಪತ್ರವನ್ನು ಗುರುವಾರ ಗಣ್ಯರು ಬಿಡುಗಡೆಗೊಳಿಸಿದರು 
ನರೇಗಲ್ ಪಟ್ಟಣದಲ್ಲಿ ಜ.24ರಂದು ನಡೆಯುವ ಹೋಬಳಿ ಮಟ್ಟದ ಹಿಂದೂ ಸಮ್ಮೇಳನದ ಭಿತ್ತಿಪತ್ರವನ್ನು ಗುರುವಾರ ಗಣ್ಯರು ಬಿಡುಗಡೆಗೊಳಿಸಿದರು    

ನರೇಗಲ್:‌ ‘ಭಾರತೀಯರೆಲ್ಲರೂ ಒಂದೇ ಎಂಬ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಮಾತಾಗಬೇಕು ಆಗ ಮಾತ್ರ ಸುಭದ್ರ, ಸಂಘಟಿತ ದೇಶ ನಿರ್ಮಿಸಲು ಸಾಧ್ಯ’ ಎಂದು ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ನರೇಗಲ್ ಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಕರಪತ್ರ ಗುರುವಾರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಅವರು, ಜ.24ರಂದು ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ಹಿಂದೂ ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದರು

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪಿಸಿ ನೂರು ವರ್ಷ ಪೂರ್ಣಗೊಳಿಸಿದ ನಿಮಿತ್ತ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಸಮ್ಮೇಳನ ಮೂಲಕ ಹಿಂದೂ ಜಾಗೃತಿ, ರಾಷ್ಟ್ರಪ್ರೇಮ ಭಾವನೆಯನ್ನು ದೇಶದ ನಾಗರಿಕರಲ್ಲಿ ಮೂಡಿಸಲಾಗುತ್ತಿದೆ’ ಎಂದರು.

ADVERTISEMENT

ಸಮ್ಮೇಳನ ಅಧ್ಯಕ್ಷ ಬಸವರಾಜ ವಂಕಲಕುಂಟಿ ಅವರು ಸಮ್ಮೇಳನ ಸಿದ್ದತೆ ಕುರಿತು ಮಾಹಿತಿ ನೀಡಿದರು. ಆನಂದ ಕುಲಕರ್ಣಿ, ಜಗದೀಶ ಸಂಕನಗೌಡ್ರ, ಆರ್.ಕೆ. ಗಚ್ಚಿನಮಠ, ಉಮೇಶ ಪಾಟೀಲ, ರಘುನಾಥ ಕೊಂಡಿ, ಮಂಜುನಾಥ ಹೆಗಡೆ, ಎಸ್.ಕೆ. ಪಾಟೀಲ, ಮಲ್ಲನಗೌಡ ಪಾಟೀಲ, ಶಿವಕುಮಾರ ಮಾವಿನಕಾಯಿ, ಚನಬಸಪ್ಪ ಕುಷ್ಟಗಿ, ರವಿ ಮ್ಯಾಗೇರಿ, ಮಹೇಶ ಜೋಳದ, ಸುರೇಖಾ ರಾಯಭಾಗಿ, ಶಿಮಾ ಕೊಂಡಿ, ನಿರ್ಮಲಾ ಹಿರೇಮಠ ಇದ್ದರು.