ADVERTISEMENT

ಗೊಜನೂರಲ್ಲಿ ಕಾಮಣ್ಣನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 13:38 IST
Last Updated 26 ಮಾರ್ಚ್ 2024, 13:38 IST
 ಹೋಳಿ ಹಬ್ಬದ ನಿಮಿತ್ತ ಲಕ್ಷ್ಮೇಶ್ವರ ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ಮಂಗಳವಾರ ರತಿ-ಕಾಮಣ್ಣರ ಮೂರ್ತಿ ಮೆರವಣಿಗೆ ನಡೆಯಿತು
 ಹೋಳಿ ಹಬ್ಬದ ನಿಮಿತ್ತ ಲಕ್ಷ್ಮೇಶ್ವರ ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ಮಂಗಳವಾರ ರತಿ-ಕಾಮಣ್ಣರ ಮೂರ್ತಿ ಮೆರವಣಿಗೆ ನಡೆಯಿತು   

ಲಕ್ಷ್ಮೇಶ್ವರ: ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಮರುದಿನ ಅಂದರೆ ಮಂಗಳವಾರ ರಂಗಪಂಚಮಿ ನಿಮಿತ್ತ ರತಿ-ಕಾಮಣ್ಣರ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಗ್ರಾಮದ ಸೊರಟೂರು ಓಣಿ, ಶಿವನಗೌಡರ ಓಣಿ ಮತ್ತು ಬಸವಣ್ಣ ದೇವರ ದೇವಸ್ಥಾನ ಓಣಿಯ ನಿವಾಸಿಗಳು ಮೆರವಣಿಗೆಯನ್ನು ಸಂಘಟಿಸಿದ್ದರು.

ಬಂಡಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಲಗಿ ಸದ್ದಿನೊಂದಿಗೆ ನಡೆದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ADVERTISEMENT

ನಂತರ ನಡೆದ ರಂಗಪಂಚಮಿಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.