
ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ವಿರಕ್ತಮಠದ ಜಾತ್ರಾ ಮಹೋತ್ಸವ ಜ.13ರಿಂದ 15ರ ವರೆಗೆ ಜರುಗಲಿದ್ದು, ಭಕ್ತರಿಗೆ ಜೋಳದ ರೊಟ್ಟಿ ಹಾಗೂ ಕರಿಂಡಿ ಉಣ ಬಡಿಸುವುದು ಜಾತ್ರೆಯ ವಿಶೇಷ.
ಜಾತ್ರೆ ನಿಮಿತ್ತ ಶನಿವಾರ ಮಠದ ಚೆನ್ನವೀರ ಸ್ವಾಮೀಜಿ, ಕುಂದಗೋಳ ಕಲ್ಯಾಣಪುರದ ಬಸವಣ್ಣಜ್ಜನವರು, ಬಟಗುರ್ಕಿಯ ಗದಗಯ್ಯ ಸ್ವಾಮೀಜಿ ಅವರುಗಳು ಚಕ್ಕಡಿ ಮೆರವಣಿಗೆ ಮೂಲಕ ಭಕ್ತರಿಂದ ಜೋಳದ ರೊಟ್ಟಿ ಸಂಗ್ರಹಿಸಿದರು.
ಮಹಿಳೆಯರು ರೊಟ್ಟಿ ತುಂಬಿದ ಬಿದಿರಿನ ಬುಟ್ಟಿಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಜಾತಿ, ಮತ ಬೇಧವಿಲ್ಲದೆ ಜಾತ್ರೆಗೆ ರೊಟ್ಟಿ ನೀಡಿದರು.
ಈ ವೇಳೆ ಅನ್ನಧಾನಯ್ಯ ಹಿರೇಮಠ, ನಿಂಗಪ್ಪ ಹೊಸೂರ, ಆರ್.ಎಸ್. ಪಾಟೀಲ, ಮಹಾದೇವಪ್ಪ ಬಿಷ್ಟಣ್ಣವರ, ನಿಂಗಪ್ಪ ಕಳ್ಳಿಮನಿ, ಪಿ.ಎಚ್. ಪಾಟೀಲ, ಶಿವಲಿಂಗಯ್ಯ ಹಿರೇಮಠ, ಮಹಾಲಿಂಗಪ್ಪ ಅಡರಕಟ್ಟಿ, ವಿರೂಪಾಕ್ಷಪ್ಪ ಚೂರಿ, ಯೋಗಪ್ಪ ಕುಂದರಗಿ, ನಿಂಗಪ್ಪ ರಾಯಣ್ಣವರ, ಮಲ್ಲಪ್ಪ ಯಳವಂಕಿ, ದೇವಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.