ADVERTISEMENT

ಗದಗ: ಹೈಬ್ರಿಡ್‌ ಕಾಡುಬೆಕ್ಕು ಗೋಚರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 23:36 IST
Last Updated 28 ಜನವರಿ 2026, 23:36 IST
ಹೈಬ್ರಿಡ್‌ ಬೆಕ್ಕು
ಹೈಬ್ರಿಡ್‌ ಬೆಕ್ಕು   

ಗದಗ: ರೋಣ ಮತ್ತು ಗಜೇಂದ್ರಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಮಾಂಸಾಹಾರಿ ಪ್ರಾಣಿಗಳ ಸಮೀಕ್ಷೆ ನಡೆಸುವಾಗ ಅರಣ್ಯ ಇಲಾಖೆ ಸಿಬ್ಬಂದಿಗೆ ಹೈಬ್ರಿಡ್‌ ಕಾಡುಬೆಕ್ಕು ಕಾಣಿಸಿದೆ. ಕಳೆದ ವರ್ಷ ‘ವೂಲ್ಫ್‌ಡಾಗ್‌’ ಕಂಡುಬಂದಿದ್ದವು.

‘ರೋಣ– ಇಟಗಿ ಮಾರ್ಗದ ಹುಲ್ಲುಗಾವಲಿನಲ್ಲಿ ಪಕ್ಷಿಯನ್ನು ಹಿಡಿದು ತಿನ್ನುತ್ತಿದ್ದ ಹೈಬ್ರಿಡ್‌ ಕಾಡುಬೆಕ್ಕು ಗೋಚರಿಸಿತು. ಕಾಡಂಚಿನ ಗ್ರಾಮಗಳಲ್ಲಿ ಈಚೆಗೆ ಇಂತಹ ಬೆಕ್ಕುಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚುತ್ತಿದೆ’ ಎಂದು ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಅನ್ವರ್ ಕೋಲ್ಹಾರ ತಿಳಿಸಿದರು.

‘ಗಜೇಂದ್ರಗಡ, ರೋಣ ಭಾಗದಲ್ಲಿ ತೋಳಗಳ ಸಂಖ್ಯೆ ಜಾಸ್ತಿ ಇದೆ. ಬೀದಿನಾಯಿಗಳು ಕಾಡಿಗೆ ಲಗ್ಗೆ ಇಡುತ್ತಿರುವ ಕಾರಣ ಕ್ರಾಸ್‌ ಬ್ರೀಡ್‌ ಆಗುತ್ತಿವೆ. ಅದೇ ರೀತಿ, ಬೆಕ್ಕುಗಳಲ್ಲೂ ಕ್ರಾಸ್‌ಬ್ರೀಡ್‌ ಆಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಹೈಬ್ರಿಡ್‌ ಕಾಡುಬೆಕ್ಕುಗಳ ಗುಣಲಕ್ಷಣವು ನಾಡು, ಕಾಡುಬೆಕ್ಕುಗಳಿಗಿಂತ ಭಿನ್ನವಾಗಿರುತ್ತದೆ. ಮುಖದ ಕೆಳಭಾಗ ಮತ್ತು ಕಾಲಿನಲ್ಲಿ ಬಿಳಿ ಬಣ್ಣ ಇರುತ್ತದೆ. ಮೈಮೇಲಿನ ಪಟ್ಟೆಗಳೂ ಸ್ವಲ್ಪ ಭಿನ್ನವಾಗಿರುತ್ತದೆ’ ಎಂದು ರೋಣ ತಾಲ್ಲೂಕು ಜಕ್ಕಲಿ ಗ್ರಾಮದ ಜೀವವೈವಿಧ್ಯ ಸಂಶೋಧಕ ಸಂಗಮೇಶ ಕಡಗದ ತಿಳಿಸಿದರು.

‘ನಾಡಿನ ಬೆಕ್ಕು, ನಾಯಿಗಳಿಂದ ಕಾಡು ಬೆಕ್ಕು, ತೋಳ ಮತ್ತು ನರಿಗಳ ವಂಶವಾಹಿಗೆ ಧಕ್ಕೆಯಾಗುತ್ತದೆ. ಇದು ಹೀಗೆ ಮುಂದುವರಿದರೆ ಮೂಲವೇ ಮರೆಯಾಗುವ ಅಪಾಯ ಹೆಚ್ಚಿದೆ’ ಎಂದು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.