ADVERTISEMENT

ತ್ಯಾಗ, ಬಲಿದಾನ ಸ್ಮರಿಸಿ: ಸಂಕನೂರ

ಕೆಎಲ್‌ಇ ಶಾಲೆಯ ಬೃಹತ್ ಧ್ವಜಸ್ತಂಭದಲ್ಲಿ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:31 IST
Last Updated 16 ಆಗಸ್ಟ್ 2022, 4:31 IST
ಗದಗ ನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ನಿರ್ಮಿಸಿರುವ 110 ಅಡಿ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ ವಿಧಾನ ಪರಿಷತ್‌ ಎಸ್‌.ವಿ.ಸಂಕನೂರ ಧ್ವಜಾರೋಹಣ ನೆರವೇರಿಸಿದರು.
ಗದಗ ನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ನಿರ್ಮಿಸಿರುವ 110 ಅಡಿ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ ವಿಧಾನ ಪರಿಷತ್‌ ಎಸ್‌.ವಿ.ಸಂಕನೂರ ಧ್ವಜಾರೋಹಣ ನೆರವೇರಿಸಿದರು.   

ಗದಗ: ನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಿರುವ 110 ಅಡಿ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ ವಿಧಾನ ಪರಿಷತ್‌ ಎಸ್‌.ವಿ.ಸಂಕನೂರ ಅವರು ಸೋಮವಾರ ಧ್ವಜಾರೋಹಣ ನೆರವೇರಿಸಿದರು.

‘ರಾಷ್ಟ್ರಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಶಾಲೆಯ ಪ್ರಾಂಶುಪಾಲ ಕಲ್ಪನಾ ಚಚಡಿ ಮಾತನಾಡಿ, ‘ದೇಶವು ಸ್ವಾತಂತ್ರ್ಯ ಪಡೆದು ಇಂದಿಗೆ 75 ವರ್ಷಗಳಾದವು. ಜಗತ್ತಿನ ಅನೇಕ ರಾಷ್ಟ್ರಗಳು ಇಂದು ಭಾರತದ ಸ್ನೇಹ ಬೆಳೆಸಲು ನಾ ಮುಂದು ತಾ ಮುಂದು ಎಂದು ದಾಪುಗಾಲು ಹಾಕುತ್ತಾ ಬರುವ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದರು.

ADVERTISEMENT

ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಈಶಣ್ಣ ಮುನವಳ್ಳಿ, ವೀರೇಶ ಕೂಗು, ಅಶೋಕ ನೀಲುಗಲ್ ಹಾಗೂ ರಜನಿ ಪಾಟೀಲ್ ಮತ್ತು ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಜಿ.ಪಾಟೀಲ, ಎಂ.ಬಿ.ಕೊಳವಿ, ಡಾ. ಜಿ.ಶಂಕರ್‌, ಡಾ. ಎಸ್‌.ಆರ್.ಪಾಟೀಲ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್‌.ಬಿ.ಹಾವೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.