ಲಕ್ಷ್ಮೇಶ್ವರ: ಪಟ್ಟಣದ ಪೊಲೀಸರು ಅಂತರರಾಜ್ಯ ಕಾರು ಕಳ್ಳನನ್ನು ಬಂಧಿಸಿ, ಕದ್ದ ₹15 ಲಕ್ಷ ಮೌಲ್ಯದ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರು ಕಳ್ಳನನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಉಂಬಳಬೈಲಿನ ಸೈಯದ್ ಇರ್ಫಾನ್ ಉರ್ಫ ನಿಹಾಲ್ ಎಂದು ಗುರುತಿಸಲಾಗಿದೆ.
ದೆಹಲಿಯಲ್ಲಿ ಒಂದು ಕಾರು ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಎರಡು ಕಾರುಗಳನ್ನು ಕದ್ದಿರುವುದಾಗಿ ತಿಳಿದುಬಂದಿದೆ. ಕಾರಿನೊಂದಿಗೆ ಮಂಗಳವಾರ ಲಕ್ಷ್ಮೇಶ್ವರದ ರಂಭಾಪುರಿ ನಗರದಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಂ.ಯರಗುಪ್ಪಿ, ಪಿಎಸ್‍ಐ ಯುಸೂಫ್ ಜಮೂಲಾ, ಕ್ರೈಮ್ ಪಿಎಸ್‍ಐ ವಿ.ಜಿ. ಪವಾರ, ಎಎಸ್‍ಐಗಳಾದ ಎಂ.ಎ. ಮೌಲ್ವಿ, ಟಿ.ಕೆ.ರಾಠೋಡ, ವೈ.ಎಸ್. ಕೂಬಿಹಾಳ, ಎಸ್.ಎಸ್. ಮಕಾನದಾರ, ಜಿ.ಎಂ. ಬೂದಿಹಾಳ, ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.