ADVERTISEMENT

ಹುಲಕೋಟಿ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇಂದು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:53 IST
Last Updated 29 ಜನವರಿ 2026, 8:53 IST
ಗದಗ ತಾಲ್ಲೂಕಿನ ಹುಲಕೋಟಿಯ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಗದುಗಿನ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ ‘ನಮ್ಮ ಪೀಠದ ಗುರು ಪರಂಪರೆ’ ವಿಷಯದ ಕುರಿತು ಮಾತನಾಡಿದರು
ಗದಗ ತಾಲ್ಲೂಕಿನ ಹುಲಕೋಟಿಯ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಗದುಗಿನ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ ‘ನಮ್ಮ ಪೀಠದ ಗುರು ಪರಂಪರೆ’ ವಿಷಯದ ಕುರಿತು ಮಾತನಾಡಿದರು   

ಗದಗ: ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೈಲಾಸ ಆಶ್ರಮ ಮಹಾಸಂಸ್ಥಾನಕ್ಕೆ ಸೇರಿದ ಹುಲಕೋಟಿ ಗ್ರಾಮದಲ್ಲಿರುವ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವ ಕಾರ್ಯಕ್ರಮ ಬುಧವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಫಕೀರೇಶ್ವರ ಮಹಾಸಂಸ್ಥಾನ ಮಠದ ಫಕೀರೇಶ್ವರ ಸ್ವಾಮೀಜಿ, ಹೊಸಳ್ಳಿ ಬೂದೀಶ್ವರ ಸಂಸ್ಥಾನ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ, ಬಳಗಾನೂರಿನ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು, ಅಣ್ಣಿಗೇರಿಯ ರುದ್ರಮುನೀಶ್ವರ ದಾಸೋಹಮಠದ ಶಿವಕುಮಾರ ಸ್ವಾಮೀಜಿ, ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ, ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಬಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಹ್ಮಕುಮಾರಿ ಜಯಂತಿ ಸಮ್ಮುಖ ವಹಿಸಿ ‘ನಮ್ಮ ಪೀಠದ ಗುರು ಪರಂಪರೆ’ ವಿಷಯದ ಕುರಿತು ಮಾತನಾಡುವರು.

ಸಂಜೆ 6ಕ್ಕೆ ಜಗನ್ಮಾತೆ ರಾಜರಾಜೇಶ್ವರಿ ಮತ್ತು ಶ್ರೀಗಳವರ ಹೂವಿನ ಪಲ್ಲಕ್ಕಿಯಲ್ಲಿ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ADVERTISEMENT

ಸಚಿವ ಎಚ್.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಮುಖಂಡರಾದ ಎಸ್.ಕೆ.ಪಾಟೀಲ, ರವಿ ಎಂ. ಮೂಲಿಮನಿ, ಕೆ.ಆರ್.ಪ್ರಭು, ಎನ್.ಆರ್.ಸಾವಕಾರ, ಜೆ.ಕೆ.ಜಮಾದಾರ, ಹಯಗ್ರೀವಾಚಾರ್‌, ಸಿ.ಬಿ.ಕರಿಕಟ್ಟಿ, ಎಂ.ಡಿ.ದುರ್ಗಣ್ಣವರ, ಶಿವರತ್ನಕುಮಾರ ಪಾಟೀಲ, ಡಿ.ಜಿ.ಜೋಗಣ್ಣವರ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.