ADVERTISEMENT

ಸಚಿವ ಸಿ.ಸಿ.ಪಾಟೀಲ ಪರ ನಟ ಕೋಮಲ್ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 7 ಮೇ 2023, 3:12 IST
Last Updated 7 ಮೇ 2023, 3:12 IST
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ನಟ ಕೋಮಲ ಅವರು ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ರೋಡ್ ಶೋ ನಡೆಸಿದರು
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ನಟ ಕೋಮಲ ಅವರು ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ರೋಡ್ ಶೋ ನಡೆಸಿದರು   

ನರಗುಂದ: ತಾಲ್ಲೂಕಿನ ಕೊಣ್ಣೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ನಟ ಕೋಮಲ್ ಅವರು ಶನಿವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.

ಕೋಮಲ ಪ್ರಚಾರ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತು. ನಂತರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೋಮಲ್, ಸಿ.ಸಿ.ಪಾಟೀಲಗೆ ಮತ ನೀಡುವಂತೆ ಕೋರಿದರು.

‘ಮಲಪ್ರಭೆ ನದಿಗೆ ಪದೇ ಪದೇ ಪ್ರವಾಹ ಬಂದು ಈ ಭಾಗದ ಜನತೆ ತೊಂದರೆ ಅನುಭವಿಸಿದಾಗ ಶಾಶ್ವತ ಪರಿಹಾರ ಕಂಡುಕೊಂಡಿದ್ದು ಬಿಜೆಪಿ ಸರ್ಕಾರ’ ಎಂದು ಸಿ.ಸಿ.ಪಾಟೀಲ ಹೇಳಿದರು.

ADVERTISEMENT

ನೇತಾಜಿಗೌಡ ಕೆಂಪನಗೌಡ್ರ, ನಿಂಗಪ್ಪ ಸೋಮಪೂರ, ಎಸ್.ಬಿ. ಯಲ್ಲಪ್ಪಗೌಡ್ರು, ಸಾಲಿಗೌಡ್ರು, ಪರಪ್ಪ ಸಹಕಾರ, ಪ್ರವೀಣ್ ಯಲಿಗಾರ, ಕೊಟ್ರೇಶ್ ಕೋಟ್ರಶೆಟ್ಟರ, ಬಿ.ಬಿ.ಐನಾಪೂರ, ಚಂದ್ರು ದಂಡಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.