ADVERTISEMENT

ಕುಡುವಕ್ಕಲಿಗರ ಭವನ ರಾಜ್ಯದಲ್ಲಿಯೇ ಮಾದರಿಯಾಗಲಿ

ಕುಡುವಕ್ಕಲಿಗ ಸಮಾಜದಿಂದ ಸಚಿವ ಎಚ್.ಕೆ.ಪಾಟೀಲಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:14 IST
Last Updated 18 ಜನವರಿ 2026, 4:14 IST
ಕುಡುವಕ್ಕಲಿಗರ ಭವನಕ್ಕೆ ಅನುದಾನ ದೊರಕಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಅವರನ್ನು ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು
ಕುಡುವಕ್ಕಲಿಗರ ಭವನಕ್ಕೆ ಅನುದಾನ ದೊರಕಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಅವರನ್ನು ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು   

ಗದಗ: ‘ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘವು ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ಬಳಿ ನಿರ್ಮಿಸುತ್ತಿರುವ ಕುಡುವಕ್ಕಲಿಗರ ಭವನವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ರಾಜ್ಯದಲ್ಲಿಯೇ ಮಾದರಿ ಆಗುವಂತೆ ನಿರ್ಮಾಣಗೊಳ್ಳಲಿ’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿ ಪ್ರಾಂಗಣದಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಕುಡುವಕ್ಕಲಿಗರ ಭವನಕ್ಕೆ ಈಗಾಗಲೇ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿದ್ದು, ಈ ಮೊದಲು ಮಾತು ನೀಡಿದಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ₹28 ಲಕ್ಷ ಬಿಡುಗಡೆ ಮಾಡಲಾಗಿದೆ. ಈ ಹಣ ಸದ್ಭಳಕೆ ಆಗಬೇಕಲ್ಲದೆ ಕಟ್ಟಡದ ಗುಣಮಟ್ಟ, ಸೌಲಭ್ಯಗಳು ಒಳ್ಳೆಯ ರೀತಿಯಿಂದ ಇರಬೇಕು. 2026 ಅಂತ್ಯದೊಳಗೆ ಉದ್ಘಾಟನೆಯಾಗುವಂತೆ ಕ್ರಮ ವಹಿಸಿ. ಶೀಘ್ರದಲ್ಲಿಯೇ ಸ್ಥಳಕ್ಕೆ ಭೇಟಿ ನೀಡುವೆ’ ಎಂದರು.

ADVERTISEMENT

ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ‘ಕುಡುವಕ್ಕಲಿಗರ ಭವನವನ್ನು ರಾಜ್ಯದಲ್ಲಿಯೇ ಮಾದರಿ ಆಗುವ ರೀತಿಯಲ್ಲಿ ನಿರ್ಮಿಸಲು ₹3.50 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿತ್ತು. ಭೂಮಿಪೂಜೆಗೆ ಬಂದಿದ್ದ ಸಚಿವರು ಸ್ಥಳೀಯ ಶಾಸಕರ ಅನುದಾನದಿಂದ ₹20 ಲಕ್ಷ ಬಿಡುಗಡೆ ಮಾಡಿದ್ದರು. ಸಂಘಟನೆ ಮತ್ತು ಸಮಾಜವು ಬೇರೆ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಪ್ರಯತ್ನಿಸಿದೆ’ ಎಂದರು.

ಮುಖಂಡರಾದ ಪರಮೇಶ್ವರಪ್ಪ ಜಂತ್ಲಿ, ಸಿದ್ದರಾಮಪ್ಪ ಗೋಜನೂರ, ವಸಂತಪ್ಪ ಕನಾಜ, ಚಂದ್ರಶೇಖರ ರಾಜೂರ, ಗೋಳಪ್ಪ ಮಂಟೂರ, ಶಶಿಧರ ಕನಾಜ, ಶಿವಕುಮಾರ ರೋಣದ ಇದ್ದರು. 

ಕಟ್ಟಡ ನಿರ್ಮಾಣ ಮಂದಗತಿಯಲ್ಲಿ ಸಾಗುತ್ತಿರುವುದನ್ನು ವೀಕ್ಷಿಸಿ ಸಚಿವ ಎಚ್.ಕೆ.ಪಾಟೀಲರು ಮುಖ್ಯಮಂತ್ರಿಗಳ ಮನವೊಲಿಸಿ ಅನುದಾನ ಬಿಡುಗಡೆ ಮಾಡಿಸಿರುವುದು ಆನೆಬಲ ನೀಡಿದೆ
ಶಿವಕುಮಾರ ಪಾಟೀಲ ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ