ADVERTISEMENT

ಕುರುಗೋಡು ಪುರಸಭೆ ಬಜೆಟ್: ಅನುದಾನ ತಾರತಮ್ಯ, ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 14:37 IST
Last Updated 29 ಮಾರ್ಚ್ 2025, 14:37 IST
ಕುರುಗೋಡಿನ ಪುರಸಭೆಯಲ್ಲಿ ಶನಿವಾರ ಜರುಗಿದ ಬಜೆಟ್ ಸಭೆಯಲ್ಲಿ ಭಾಗವಹಿಸಿದ ಸದಸ್ಯರು
ಕುರುಗೋಡಿನ ಪುರಸಭೆಯಲ್ಲಿ ಶನಿವಾರ ಜರುಗಿದ ಬಜೆಟ್ ಸಭೆಯಲ್ಲಿ ಭಾಗವಹಿಸಿದ ಸದಸ್ಯರು   

ಕುರುಗೋಡು: ಇಲ್ಲಿನ ಪುರಸಭೆಯಲ್ಲಿ ಶನಿವಾರ ೨೦೨೫-೨೬ನೇ ಸಾಲಿನ ₹೩೬.೯೪ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.

ಎಲ್ಲ ಮೂಲಗಳಿಂದ ₹23.58 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹ 23.21 ಕೋಟಿ ವೆಚ್ಚಮಾಡಲು ಉದ್ದೇಶಿಸಿದೆ.

ಆಯ:

ADVERTISEMENT

ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ ₹1.15 ಕೋಟಿ,

ಖಾತಾ ಬದಲಾವಣೆ, ನಕಲು ಪ್ರತಿ ಶುಲ್ಕದಿಂದ ₹ 24.20 ಲಕ್ಷ,

ನಳ ಸಂಪರ್ಕ ಉಳ್ಳವರಿಂದ ನೀರಿನ ಶುಲ್ಕ ₹34.10 ಲಕ್ಷ,

ಟ್ರೇಡ್ ಪರವಾನಿಗೆ ಯಿಂದ ₹6 ಲಕ್ಷ,

ಕಟ್ಟಡ ಪರವಾನಿಗೆಯಿಂದ ₹14.52 ಲಕ್ಷ,

ಅಭಿವೃದ್ಧಿ ಶುಲ್ಕಗಳಿಂದ ₹ 50 ಲಕ್ಷ,

ಎಸ್.ಎಫ್.ಸಿ. ಅನುದಾನ ದಿಂದ ₹ 47 ಲಕ್ಷ,

ವೇತನ ಅನುದಾನ ₹ 2 ಕೋಟಿ,

ವಿದ್ಯುತ್ ಅನುದಾನ ₹ 59 ಲಕ್ಷ,

15ನೇ ಹಣಕಾಸು ₹ 2.79 ಕೋಟಿ,

ಎಸ್.ಎಫ್.ಸಿ. ವಿಶೇಷ ಅನುದಾನ ₹2.75,

ಕೋಟಿ, ಸ್ವಚ್ಛ ಭಾರತ ಮಿಷನ್ ಯೋಜನೆ ₹ 85 ಲಕ್ಷ,

ಮಾರುಕಟ್ಟೆ ಮತ್ತು ಮಳಿಗೆ ಬಾಡಿಗೆ ₹ 13.20 ಲಕ್ಷ,

ಜಾಹಿರಾತು ಶುಲ್ಕ ₹ 22 ಸಾವಿರ,

ಆಸ್ತಿ ತೆರಿಗೆ ಮೇಲೆ ವಸೂಲಿಯಲ್ಲಿ ಸೆಸ್ಸೆ ಮೊತ್ತ ₹23.72 ಲಕ್ಷ,

ಸಿ.ಎಂ.ಎಸ್.ಎM.ಟಿ.ಡಿ.ಪಿ./ನಗರೋತ್ಥಾನ ₹ 11 ಕೋಟಿ,

ಪ್ರಕೃತಿ ವಿಕೋಪ ಪರಿಹಾರ ನಿಧಿ ₹ 15 ಲಕ್ಷ,

ಇತರೇ ಮೂಲಗಳಿಂದ ₹ 17.63 ಲಕ್ಷ ಸೇರಿ

ಒಟ್ಟಾರೆ ₹ 23,58,60 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ವೆಚ್ಚ: ಮಿನಿ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ವಾಹನ ಖರೀದಿ, ಅಂಗವಿಕಲರ ಯೋಜನೆ, ನಗರೋತ್ಥಾನ ಯೋಜನೆ ಅನುಷ್ಟಾನ, ಕಚೇರಿ ಉಪಕರಣ ಮತ್ತು ಪೀಠೋಪಕರಣ, ದೊಡ್ಡಬಸವೇಶ್ವರ ಜಾತ್ರೆ, 15ನೇ ಹಣಕಾಸು ಯೋಜನೆ ಅನುದಾನ ಬಳಕೆ ಮತ್ತು ಇತರೇ ವೆಚ್ಚ ಸೇರಿ ಒಟ್ಟು ₹ 23 ಕೋಟಿ ವೆಚ್ಚಮಾಡಲು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸಿದ್ದಪಡಿಸಲಾಗಿದೆ.

ನೀರಸ ಚರ್ಚೆ: ಬಜೆಟ್ ಮಂಡನೆಗಾಗಿ ಕರೆದಿದ್ದ ವಿಶೇಷ ಸಭೆಯಲ್ಲಿ ಯಾವುದೇ ಪರಿಣಾಮಕಾರಿ ಚರ್ಚೆ ನಡೆಯಲಿಲ್ಲ. ಬಹುತೇಕ ಸದಸ್ಯರು ಅಧಿಕಾರಿಗಳು ನೀಡಿದ ಬಜೆಟ್ ಪ್ರತಿಗಳನ್ನು ನೋಡುತ್ತಾ ಕುಳಿತರು.

ಪ್ರಮುಖವಾಗಿ ಚರ್ಚಿಸಬೇಕಾದ ವಿಷಯ ಬಿಟ್ಟು ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರು ಎನ್ನುವ ತಾರತಮ್ಯ ಅಧಿಕಾರಿಗಳು ಮತ್ತು ಶಾಸಕರು ಮಾಡುತ್ತಿದ್ದಾರೆ ಎಂಬ ಆರೋಪದತ್ತ ತಿರುಗಿತು. ಬಿಡಾಡಿ ದನ, ಬೀದಿ ನಾಯಿ ಮತ್ತು ಕೋತಿಗಳ ಉಪಟಳ ನಿಯಂತ್ರಿಸುವ0ತೆ ಕೆಲವು ಸದಸ್ಯರು ಒತ್ತಾಯಿಸಿದರು.

ಮಟನ್ ಮಾರುಕಟ್ಟೆ ಸ್ಥಳಾಂತರ ಕುರಿತು ಬಿಸಿ ಚರ್ಚೆ ಜರುಗಿತು. ಪುರಸಭೆಗೆ ಸೇರಿದ ಎಲ್ಲ ಮಳಿಗೆಗಳಲ್ಲಿ ಅನೇಕ ವರ್ಷಗಳಿಂದ ಇರುವ ವರ್ತಕರನ್ನು ತೆರುವುಗೊಳಿಸಿ ಕಟ್ಟಡ ನವ ನಿರ್ಮಾಣ ಮಾಡುವ ಚರ್ಚೆ ಮತ್ತು ಸಾರ್ವಜನಿಕ ರುದ್ರಭೂಮಿ ಅಭಿವೃದ್ಧಿ, ಹಸರೀಕರಣ ಕೈಗೊಳ್ಳುವ ಒತ್ತಾಯ ಗಮನಸೆಳೆಯಿತು. ದಿನ ಮಾರುಕಟ್ಟೆ ಮತ್ತು ಮಿನಿ ಬಸ್ ನಿಲ್ದಾಣ ಶೀಘ್ರ ನಿರ್ಮಾಣಕ್ಕೆ ಮುಂದಾಗುವಂತೆ ಕೆಲವು ಸದಸ್ಯರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಹರ್ಷವರ್ಧನ ರೆಡ್ಡಿ, ಲೆಕ್ಕಾಧಿಕಾರಿ ರಾಜಶೇಖರ್ ಮತ್ತು ಸದಸ್ಯರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.