
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಮುಂದುವರೆದಿದ್ದು, ಸೋಮವಾರ ನವಶಿಲಾಯುಗದ ಕೈಕೊಡಲಿ ಮತ್ತು ಕಂಬದ ಬೋಧಿಗೆ ಪ್ರಾಚ್ಯ ಅವಶೇಷ ಸಿಕ್ಕಿದೆ.
‘ಕೈ ಕೊಡಲಿ ಆಕಾರದ ಕಲ್ಲು ಮತ್ತು ಕಂಬದ ಮೇಲೆ ಆಸರೆಯಾಗುವ ಬೋಧಿಗೆ ಕುರಿತು ತಜ್ಞರು ಅಧ್ಯಯನ ನಡೆಸಿದ ಬಳಿಕ ಹೆಚ್ಚಿನ ವಿವರಗಳು ಸಿಗಲಿವೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
‘ನಾಲ್ಕು ದಿನಗಳಿಂದ ಉತ್ಖನನ ನಡೆದಿದೆ. 24 ಮಹಿಳೆಯರು ಮತ್ತು 10 ಪುರುಷರು ತೊಡಗಿದ್ದಾರೆ. ಈಗ ನಿಗದಿಯಾಗಿರುವ ₹ 374 ದಿನಗೂಲಿ ಸಾಕಾಗುವುದಿಲ್ಲ. ಅದನ್ನು ಕನಿಷ್ಠ ₹500ಕ್ಕೆ ಏರಿಕೆ ಮಾಡಬೇಕು’ ಎಂದು ಉತ್ಖನನ ಕಾರ್ಮಿಕರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.