
ಪ್ರಜಾವಾಣಿ ವಾರ್ತೆ
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳದಲ್ಲಿ ಶುಕ್ರವಾರ ಪ್ರಾಚ್ಯ ಅವಶೇಷಗಳು ಪತ್ತೆಯಾಗಲಿಲ್ಲ. ಆದರೆ, ಉತ್ಖನನ ನಡೆದ ‘ಎ’ ಬ್ಲಾಕ್‌ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣಕ್ಕೆ ಬಿದ್ದ ನೀರು ಸಿದ್ಧರ ಬಾವಿಗೆ ಹರಿದು ಹೋಗಲು ಅಳವಡಿಸಿರುವ ಪೈಪ್‌ನ ಕೆಳಭಾಗದಲ್ಲಿ ಹಾವು ಕಾಣಿಸಿದೆ. ಇದರಿಂದ ಉತ್ಖನನ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು, ಸ್ಥಳೀಯರು ಹೆದರಿದ್ದಾರೆ.
‘ಗುರುವಾರ ಮೂರು ಹೆಡೆಯ ನಾಗ ಶಿಲ್ಪ ಪತ್ತೆಯಾಗಿತ್ತು. ಶುಕ್ರವಾರ ಬೆಳಿಗ್ಗೆ ಉತ್ಖನನ ಆರಂಭಿಸಿದ ವೇಳೆ ಹಾವು ಕಾಣಿಸಿತು. ಎರಡೂವರೆ ಅಡಿ ಉದ್ದದ ಹಾವನ್ನು ಉತ್ಖನನ ಮೇಲ್ವಿಚಾರಕ ಸಿಬ್ಬಂದಿ ರಕ್ಷಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.